alex Certify ಮೈ ಜುಮ್ಮೆನಿಸುವಂತಹ ಸಾಹಸ ಕ್ರೀಡೆಗಳನ್ನು ಆಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಜುಮ್ಮೆನಿಸುವಂತಹ ಸಾಹಸ ಕ್ರೀಡೆಗಳನ್ನು ಆಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಜೀವನದ ಜಂಜಾಟದ ನಡುವೆ ಒದ್ದಾಡುವಂತಹ ಜನರಿಗೆ ಒಂದು ದಿನವಾದರೂ ಆನಂದದಿಂದ ಕಳೆಯಬೇಕು ಎಂದೆನಿಸುವುದು ಸಹಜ. ಜೀವನದ ಮುಕ್ಕಾಲು ಭಾಗ ಕೆಲಸದ ಒತ್ತಡದಲ್ಲೇ ಕಳೆಯುತ್ತೇವೆ. ಹಾಗಾಗಿ ಕೆಲವರು ಸ್ವಲ್ಪ ದಿನವಾದರೂ ವಿಶ್ರಾಂತಿ ಪಡೆಯಬೇಕೆಂದು ಬಯಸುತ್ತಾರೆ, ಆದರೇ ಇನ್ನೂ ಕೆಲವರು ಸಾಹಸಮಯ ಕ್ರೀಡೆಗಳಲ್ಲಿ ತೊಡಗುತ್ತಾ ಅದ್ಭುತ ಕ್ಷಣಗಳನ್ನು ಆನಂದಿಸಲು ಇಷ್ಟಪಡುತ್ತಾರೆ. ಇದು ಅವರ ಬೇಸರವನ್ನು ಕಳೆಯಲು ಸಹಾಯ ಮಾಡುವುದಂತು ಖಂಡಿತ. ಹಾಗಾಗಿ ಅಂತಹ ಸಾಹಸ ಕ್ರೀಡೆಗಳಲ್ಲಿ ತೊಡಗಲು ಬಯಸುವವರು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ.

ಪ್ಯಾರಾಗ್ಲೈಡಿಂಗ್ : ಇದು ಉಲ್ಲಾಸಭರಿತವಾದ ಸಾಹಸ ಕ್ರೀಡೆಯಾಗಿದ್ದು, ಹಕ್ಕಿಯಂತೆ ಹಾರಲು ಬಯಸುವವರು ಈ ಕ್ರೀಡೆಯನ್ನು ಆಡಬಹುದು. ಇಲ್ಲಿ ನೀವು ಆಕಾಶದಲ್ಲಿ ಹಾರುತ್ತಾ ಸುಂದರವಾದ ನೋಟಗಳನ್ನು ಆನಂದಿಸಬಹುದು, ಮೇಲಿಂದ ಕೆಳಗೆ ನೋಡಿದರೆ ನಿಮಗೆ ಎಲ್ಲವೂ ಸಣ್ಣ ಪ್ರಪಂಚದಂತೆ ಕಾಣುತ್ತದೆ. ನೀವು ಸುಂದರವಾದ ದೃಶ್ಯಗಳನ್ನು ನೋಡಿದಾಗ ನಿಮ್ಮ ಮನಸ್ಸು ಆನಂದದಿಂದ ಕುಣಿಯುತ್ತದೆ. ಹಿಮಾಚಲ ಪ್ರದೇಶದಲ್ಲಿರುವ ಬಿರ್ ಬಿಲ್ಲಿಂಗ್ ಭಾರತದಲ್ಲಿ ಪ್ಯಾರಾಗ್ಲೈಡಿಂಗ್ ಕ್ರೀಡೆಗೆ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ, ಹಿಮಾಲಯದ ತಪ್ಪಲಿನಲ್ಲಿರುವ ಕಾಡಿನ ಸೊಂಪಾದ ಹಸಿರಿನ ಸುಂದರ ನೋಟಗಳನ್ನು ನೋಡಬಹುದು. ಇಲ್ಲಿ ಆಕಾಶವು ಕೆಳಗಿರುವ ದಟ್ಟವಾದ ಸಮುದ್ರವನ್ನು ಮುಟ್ಟುವಂತಹ ಆ ನೋಟ ನಿಮ್ಮನ್ನು ಮೋಡಿ ಮಾಡುತ್ತದೆ. ಹಾಗಾಗಿ ಬಿರ್ ಬಿಲ್ಲಿಂಗ್ನಲ್ಲಿ ಪ್ಯಾರಾಗ್ಲೈಡಿಂಗ್ ನಲ್ಲಿ ಕಳೆದ ದಿನಗಳು ನಿಮ್ಮ ನೆನಪಿನಲ್ಲಿ ಸದಾ ಉಳಿದಿರುತ್ತದೆ.

ಬಂಗಿ ಜಂಪಿಂಗ್ : ನೀವು ತುಂಬಾ ಧೈರ್ಯವಂತವರಾಗಿದ್ದರೆ ಬಂಗಿ ಜಂಪಿಂಗ್ಗೆ ಹೋಗಬಹುದು. ಕೇವಲ ಒಂದು ಹಗ್ಗವನ್ನು ನಿಮಗೆ ಕಟ್ಟಿ ಪ್ರಪಾತಕ್ಕೆ ನೂಕುವ ಈ ಕ್ರೀಡೆ ಮೈ ಜುಮ್ಮೆನಿಸುತ್ತದೆ. ನೀವು ಇದರಿಂದ ಧುಮುಕುವಾಗ ಹೆದರಿಕೊಂಡು ಕೂಗುವುದಂತು ಖಂಡಿತ. ಹೃಷಿಕೇಶದ ಮೋಹನ್ ಚಟ್ಟಿ ಗ್ರಾಮದ ಬಳಿ ಇರುವ ಬಂಗಿ ಜಂಪಿಂಗ್ ತಾಣ ಭಾರತದ ಅತಿ ಎತ್ತರದ ಬಂಗಿ ಜಂಪಿಂಗ್ ಸ್ಥಳವಾಗಿದೆ. ಇದು 83 ಮೀಟರ್ ಎತ್ತರದಲ್ಲಿ ಇದೆ.

ಸ್ಕೂಬಾ ಡೈವಿಂಗ್ : ನೀರೊಳಗಿನ ಜಗತ್ತನ್ನು ನೋಡುವ ಈ ಸ್ಕೂಬಾ ಡೈವಿಂಗ್ ಸಮುದ್ರದ ನೀರಿನಲ್ಲಿ ತೇಲುತ್ತಾ ಸಮುದ್ರದ ತಳದಲ್ಲಿರುವ ಹವಳದ ರಚನೆಗಳು ಮತ್ತು ನೀರಿನೊಳಗೆ ಜೀವಿಸುವ ಜೀವಿಗಳನ್ನು ನೋಡುವಂತಹ ಒಂದು ಅದ್ಭುತವಾದ ಕ್ಷಣವಾಗಿದೆ. ಇದು ನಿಜವಾಗಿಯೂ ವಿಸ್ಮಯವಾಗಿದೆ, ಇದು ನಾವು ಬೇರೆ ಯಾವುದೋ ಗ್ರಹದಲ್ಲಿ ತೇಲುವಂತೆ ಭಾಸವಾಗುತ್ತದೆ. ಸ್ಕೂಬಾ ಗೇರ್ನೊಂದಿಗೆ, ನೀವು ಆರಾಮವಾಗಿ ಉಸಿರಾಡಲು ಮತ್ತು ಸಮುದ್ರ ಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಗುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹ್ಯಾವ್ಲಾಕ್ ದ್ವೀಪವು ಈ ಸಾಹಸ ಅನ್ವೇಷಣೆಗೆ ಸೂಕ್ತವಾಗಿದೆ, ಇದರಲ್ಲಿ ಹಲವು ಸಮುದ್ರ ಪ್ರಭೇದಗಳು ಮತ್ತು ರೋಮಾಂಚಕ ಹವಳ ರಚನೆಗಳನ್ನು ನೋಡುವ ಅವಕಾಶ ಸಿಗುತ್ತದೆ.

ಸ್ಕೈ ಡೈವಿಂಗ್ : ಸ್ಕೈ ಡೈವಿಂಗ್ ಗಾಳಿಯಲ್ಲಿ 10,00 ಅಡಿ ಎತ್ತರದಿಂದ ಬೀಳುವ ರೋಮಾಂಚನಕಾರಿ ಕ್ರೀಡೆಯಾಗಿದೆ. ಹೃದಯ ಗಟ್ಟಿ ಇರುವವರು ಮಾತ್ರ ಈ ಆಟವನ್ನು ಆಡಬಹುದು. ಈ ಕ್ರೀಡೆಯಲ್ಲಿ ವಿಮಾನದಿಂದ ಜಿಗಿದು ಪ್ಯಾರಾಚೂಟ್ ಸಹಾಯದಿಂದ ಸುರಕ್ಷಿತವಾಗಿ ಭೂಮಿಯ ಮೇಲೆ ಬಂದು ನಿಲ್ಲುತ್ತೀರಿ. ಸ್ಕೈಡೈವಿಂಗ್ ಅತ್ಯಂತ ಜನಪ್ರಿಯ ಸಾಹಸ ಕ್ರೀಡೆಯಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಸ್ಕೈಡೈವಿಂಗ್ ಮಾಡುವ ಮೂಲಕ ರೋಮಾಂಚನ ಕ್ಷಣವನ್ನು ಆನಂದಿಸುತ್ತಾರೆ. ಮಹಾರಾಷ್ಟ್ರದ ಆಂಬಿ ಕಣಿವೆ ಸ್ಕೈಡೈವಿಂಗ್ಗೆ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಕಯಾಕಿಂಗ್ : ಇದು ನೀರಿನ ಮೇಲೆ ಸಾಗುವಂತಹ ಸಾಹಸ ಕ್ರೀಡೆಯಾಗಿದೆ. ಕಯಾಕಿಂಗ್ ಅಂದರೆ ಡಬಲ್-ಬ್ಲಾಡರ್ ಪ್ಯಾಡಲ್ ಹೊಂದಿರುವ ಸಣ್ಣ, ದೋಣಿಯಲ್ಲಿ ನೀರಿನ ಮೇಲೆ ಸಾಗುವುದು. ನೀವು ದೋಣಿಯಲ್ಲಿ ಕುಳಿತು ಪ್ಯಾಡಲ್ ಮಾಡುತ್ತಾ ಸಾಗುವುದರಿಂದ ಇದು ನಿಮ್ಮ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಹೃಷಿಕೇಶ್ ಗಂಗಾ ಕಯಾಕಿಂಗ್ಗೆ ಸೂಕ್ತವಾಗಿದೆ. ಗಂಗಾನದಿಯಲ್ಲಿ ಸೌಮ್ಯವಾದ ತೆರೆಗಳಿದ್ದು, ಪ್ರವಾಹದ ಭಯವಿಲ್ಲದೇ ಕಯಾಕಿಂಗ್ನಲ್ಲಿ ತೊಡಗಬಹುದು. ಹಾಗಾಗಿ ಯಾವುದೆ ಅಡೆತಡೆಗಳಿಲ್ಲದೇ ಹೃಷಿಕೇಶದಲ್ಲಿ ರಿವರ್ ಕಯಾಕಿಂಗ್ ಚಟುವಟಿಕೆಯಲ್ಲಿ ತೊಡಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Köstliche Rezepte: 6 einfache und schmackhafte Gerichte mit Perfekte Beilagen für Nuggets: Die besten Rezepte Warmer Auberginen- und Tomatensalat Stachelbeer- und Himbeermarmelade: Eine köstliche Kombination Gebratene Forelle mit Die perfekte Garzeit für Pfifferlinge: Tipps und Gegrillte Auberginen mit Stracciatella-Käse und Tomaten: Ein mediterranes Krabbenstäbchen-Sandwiches mit frischer Zucchini mit Paprika und Tomaten für den Winter: Ein Was man Kürbiskaviar mit