BIG NEWS: ಜನರ ಅಭಿಪ್ರಾಯವನ್ನು ಹೈಕಮಾಂಡ್ ಬಳಿ ಇಟ್ಟಿದ್ದೇನೆ; ಗ್ಯಾರಂಟಿ ಸ್ಥಗಿತ ಮಾಡಿ ಎಂದಿಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಿಷ್ಕರಣೆ ಮಾಡುವಂತೆ ಹೈಕಮಾಂಡ್ ನಾಯಕರಿಗೆ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ದಿಗೆ ಹಣ ಸಿಗುತ್ತಿಲ್ಲ. ರಾಜ್ಯದ ಅಭಿವೃದ್ಧಿ ಕೆಲಸಗಳು ಕುಂಟಿತವಾಗುತ್ತಿವೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಸಚಿವರು ವರಿಷ್ಠರಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಿ, ಕಡಿತ ಮಾಡಿ ಎಂದು ನಾನು ಹೇಳಿಲ್ಲ. ಆದರೆ ಉಳ್ಳವರಿಗೆ ಕೊಡಬೇಡಿ. ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡಬೇಕು. ಈ ಬಗ್ಗೆ ಪರಿಷ್ಕರಣೆ ಮಾಡುವಂತೆ ಹೇಳಿದ್ದೇನೆ. ಜನರ ಅಭಿಪ್ರಾಯವನ್ನು ಹೈಕಮಾಂಡ್ ಬಳಿ ಇಟ್ಟಿದ್ದೇವೆ. ಇದು ಸಲಹೆಯಷ್ಟೇ ಎಂದು ತಿಳಿಸಿದರು.

ರಾಜ್ಯದಲ್ಲಿ ಜನ ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಜನರ ಅಭಿಪ್ರಾಯ ಪಡೆದು ಪರಿಷ್ಕರಿಸಿ ಎಂದು ಹೇಳಿದ್ದೇನೆ. ಇನ್ನು ಶಾಸಕರಿಗೆ ಅನುದಾನ ಕೊರತೆ ಆಗಿಲ್ಲ.
ಬಿಜೆಪಿ ಸರಕಾರ ಇದ್ದಾಗಿನದಕ್ಕಿಂತ ಹೆಚ್ಚು ಅನುದಾನ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read