alex Certify ಮಳೆಗಾಲದಲ್ಲಿ ವಿಶ್ರಾಂತಿ ಪಡೆಯಲು ಈ 5 ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ವಿಶ್ರಾಂತಿ ಪಡೆಯಲು ಈ 5 ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ

ಮಳೆಗಾಲ ಶುರುವಾಗುತ್ತಿದ್ದಂತೆ ಜನರ ಮನಸ್ಸಿನಲ್ಲಿ ಉಲ್ಲಾಸದಾಯಕ ಅನುಭವವಾಗುತ್ತದೆ. ಮತ್ತು ಪ್ರತಿದಿನದ ಜಂಜಾಟದವನ್ನು ಮರೆತು ಮನಸ್ಸಿಗೆ ವಿಶ್ರಾಂತಿ ಬೇಕು ಎಂದು ಬಯಸುತ್ತಾರೆ. ಹಾಗಾಗಿ ಹೆಚ್ಚಾಗಿ ಜನರು ಈ ಸಮಯದಲ್ಲಿ ವಾರಾಂತ್ಯದಲ್ಲಿ ಯಾವುದಾದರೂ ಪ್ರಶಾಂತವಾದ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಬಯಸುತ್ತಾರೆ. ಹಾಗಾಗಿ ದೇಶದ ಅತ್ಯಂತ ಸುಂದರವಾದ ತಾಣಗಳಲ್ಲಿ ಮಳೆಗಾಲವನ್ನು ಆನಂದಿಸಲು ಸೂಕ್ತವಾದ ಕೆಲವು ಏರ್ ಬಿಎನ್ಬಿಗಳಿಗೆ ಭೇಟಿ ನೀಡಿ ನಿಮ್ಮ ವಾರಾಂತ್ಯವನ್ನು ಆನಂದಕರವಾಗಿಸಿ. ಈ ಸ್ಥಳಗಳು ಅತ್ಯಾಕರ್ಷಕ ಹೊರಾಂಗಣ ಚಟುವಟಿಕೆಗಳು, ಮನೆಯಲ್ಲಿ ತಯಾರಿಸಿದ ಊಟ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆಯುವ ಅವಕಾಶಗಳನ್ನು ನೀಡುತ್ತವೆ. ಪ್ರಶಾಂತ ಪರ್ವತಗಳು, ಸೊಂಪಾದ ಹಸಿರಿನ ನೋಟವನ್ನು ಸವಿಯಬಹುದು.

ಥೆಂಬ್ರೆ ಕಾಟೇಜ್, ಕಾಲಿಂಪಾಂಗ್ : ಥೆಂಬ್ರೆ ಕಾಟೇಜ್ ಕಾಲಿಂಪಾಂಗ್ ನಲ್ಲಿರುವ ಒಂದು ಸುಂದರವಾದ ವಿಶ್ರಾಂತಿ ತಾಣವಾಗಿದೆ. ಪರಿಸರ ಸ್ನೇಹಿ ವಿನ್ಯಾಸದೊಂದಿಗೆ ನಿರ್ಮಿಸಲಾದ ಈ ಏರ್ ಬಿಎನ್ಬಿ ಕುಟೀರವು ಪ್ರಶಾಂತ ನೋಟಗಳನ್ನು ಮತ್ತು ಪ್ರಶಾಂತ ವಾತಾವರಣವನ್ನು ನಿಮಗೆ ನೀಡುತ್ತದೆ. ಇದು ಪಟ್ಟಣದ ಸ್ಥಳೀಯ ಆಕರ್ಷಣ ಸ್ಥಳಗಳಾದ ಶಾಂತಿಕುಂಜ್ ಮತ್ತು ಸಸ್ಯ ನರ್ಸರಿಗೆ ಹತ್ತಿರದಲ್ಲಿದೆ. ಇಲ್ಲಿ ಅಡುಗೆಮನೆ ಸೇರಿದಂತೆ ಆಧುನಿಕ ಸೌಲಭ್ಯಗಳಿವೆ. ಪ್ರವಾಸಿಗರು ಪ್ರಶಾಂತವಾದ ಮುಂಜಾನೆ ಮತ್ತು ಅದ್ಭುತ ಸಂಜೆಗಳನ್ನು ಇಲ್ಲಿ ಸವಿಯಬಹುದು.

ಟೂಲ್ ಹೌಸ್, ಕೂರ್ಗ್ : ಈ ಆಕರ್ಷಕ ಮತ್ತು ವಿಶಾಲವಾದ ಏರ್ ಬಿಎನ್ಬಿ ಕಾಟೇಜ್ ಕೂರ್ಗ್ ನಲ್ಲಿ ಸೊಂಪಾದ 70 ಎಕರೆ ಎಸ್ಟೇಟ್ ನಲ್ಲಿ ಇದೆ. ಇದು ಮಳೆಗಾಲದ ರಜಾ ದಿನಗಳನ್ನು ಕಳೆಯಲು ಸೂಕ್ತವಾಗಿದೆ. ಈ ಎಸ್ಟೇಟ್ ವಿಶೇಷವಾಗಿ ಮಳೆಗಾಲದಲ್ಲಿ ಪ್ರಶಾಂತತೆ ಮತ್ತು ಆಕರ್ಷಕ ನೋಟಗಳನ್ನು ನೀಡುತ್ತದೆ. ದೀಪೋತ್ಸವಗಳು, ಎಸ್ಟೇಟ್ ನಲ್ಲಿ ತಯಾರಿಸಿದ ಭಕ್ಷ್ಯಗಳು, ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ದಿ ಪ್ಲಾಂಟರ್ಸ್ ಫಾಯರ್, ಮುನ್ನಾರ್ : ಪ್ಲಾಂಟರ್ಸ್ ಫೋಯರ್ ಮುನ್ನಾರ್ ಬಳಿಯ ಬೆಟ್ಟದ ಮೇಲಿರುವ ಮರದಿಂದ ನಿರ್ಮಿಸಿದ 1 ಬಿಎಚ್ ಕೆ ಮನೆಯಾಗಿದೆ. ಏಲಕ್ಕಿ ತೋಟದಲ್ಲಿ ನಿರ್ಮಿಸಿದ ಈ ಮನೆಯಲ್ಲಿ ಕುಳಿತು ಪಶ್ಚಿಮ ಘಟ್ಟಗಳ ಬೆರಗುಗೊಳಿಸುವ ನೋಟಗಳನ್ನು ಮತ್ತು ತಂಪಾದ, ಮಂಜಿನ ಪರ್ವತದ ಹಿತವಾದ ಗಾಳಿಯನ್ನು ಸವಿಯಬಹುದು. ಇದು ಮಳೆಗಾಲದ ಸೊಬಗನ್ನು ಆನಂದಿಸುವವರಿಗೆ ಆಹ್ಲಾದವಾಗಿರುತ್ತದೆ. ಈ ಏರ್ ಬಿಎನ್ಬಿ ಕಾಟೇಜ್ ಅತಿಥಿಗಳ ಅನುಕೂಲಕ್ಕಾಗಿ ಸಂಪೂರ್ಣ ಸುಸಜ್ಜಿತ ಅಡುಗೆಮನೆ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ರುಚಿಯಾದ ಆಹಾರವನ್ನು ಸವಿಯುತ ಮತ್ತು ದೀಪೋತ್ಸವದೊಂದಿಗೆ ರಾತ್ರಿಯ ಬೆಳದಿಂಗಳಿನಲ್ಲಿ ಉದ್ಯಾನದಲ್ಲಿ ಮಳೆಗಾಲದ ತಂಪಾದ ಹವಾಮಾನವನ್ನು ಆನಂದಿಸಬಹುದು.

ಡೈಮಂಡ್ ಕ್ಯಾಬಿನ್, ಚೂರಲ್ಮಾಲಾ : ಕೇರಳದ ಸೂಚಿಪಾರಾ ಜಲಪಾತ ಮತ್ತು 900 ಕಂಡಿಯ ಬಳಿ ಇರುವ ಈ ವಿಶಿಷ್ಟ ಮತ್ತು ಮರೆಯಲಾಗದ ಕ್ಷಣವನ್ನು ಆನಂದಿಸಲು ಅನುಕೂಲಕರವಾದ ಈ ಏರ್ ಬಿಎನ್ಬಿಯಲ್ಲಿ ಹೋಮ್ ಸ್ಟೇ ಮತ್ತು ಸಾಕಷ್ಟು ಪಾರ್ಕಿಂಗ್ ಸೌಲಭ್ಯಗಳಿವೆ. ಅತಿಥಿಗಳು ತಮ್ಮ ಮರದ ಕುಟೀರದಲ್ಲಿ ವಿಶ್ರಾಂತಿ ಪಡೆಯುತ್ತಾ ಮನೆಯ ಆಹಾರವನ್ನು ಸವಿಯಬಹುದು. ಈ ಏರ್ ಬಿಎನ್ಬಿ ಆರಾಮದಾಯಕ ಬಾಲ್ಕನಿ ಸಹ ಇದೆ, ಇಲ್ಲಿ ನಿಂತು ಮಳೆಯಲಿ ನೆನೆಯುತ್ತಾ ರಜಾದಿನವನ್ನು ಆನಂದಿಸಬಹುದು.

ದಿ ಗಾರ್ಡನ್ – ಲ್ಯಾಂಗ್ಕಿರ್ಡಿಂಗ್, ಗಾಲ್ಫ್ ಲಿಂಕ್ಸ್, ಶಿಲ್ಲಾಂಗ್ : ಈ ಉದ್ಯಾನವು ಪ್ರಸಿದ್ಧ ಶಿಲ್ಲಾಂಗ್ ಗಾಲ್ಫ್ ಕೋರ್ಸ್ ಬಳಿ ಇದ್ದು, ಮಳೆಗಾಲವನ್ನು ಆನಂದಿಸಲು ಉತ್ತಮ ಸ್ಥಳವಾಗಿದೆ. ಪೈನ್ ಮರಗಳು ಮತ್ತು ಪರ್ವತದ ತಾಜಾ ಗಾಳಿಯಿಂದ ಸುತ್ತುವರೆದಿರುವ ಈ ಸ್ಥಳ ಶಾಂತಿಯುತ ಅನುಭವವನ್ನು ನೀಡುತ್ತದೆ. ನಗರದ ಜಂಜಾಟ ಮತ್ತು ಗದ್ದಲದಿಂದ ದೂರವಿರಲು ಬಯಸುವವರಿಗೆ ಇದು ಉತ್ತಮ ಸ್ಥಳವಾಗಿದೆ. ಈ ಆಕರ್ಷಕ ಸ್ಥಳವು ಮಂಜು ಕವಿದ ವಾತಾವರಣವನ್ನು ಹೊಂದಿದ್ದು, ಈ ಪ್ರಶಾಂತವಾದ ಪ್ರಕೃತಿ ಸೌಂದರ್ಯವನ್ನು ಬಾಲ್ಕನಿಯಲ್ಲಿ ನಿಂತು ಆನಂದಿಸಬಹುದು. ಮಳೆಗಾಲದಲ್ಲಿ ಆರಾಮದಾಯಕವಾಗಿ ಇರಲು ಬಯಸುವ ದಂಪತಿಗಳು, ಕುಟುಂಬಗಳಿಗೆ ಈ ಏರ್ ಬಿಎನ್ಬಿ ಸೂಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...