ತುಮಕೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ನಡೆದಿದೆ.
ಅಪಘಾತದ ಭೀಕರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಹೊಳೆನರಸಿಪುರ ತಾಲೂಕಿನ ಕಳ್ಳಿ ಗ್ರಾಮದ ನವೀನ್ (28) ಹಾಗೂ ತಿಪಟೂರು ತಾಅಲೂಕಿನ ಗಂಗನಘಟ್ಟದ ಶೇಷಾದ್ರಿ (47) ಮೃತ ದುರ್ದೈವಿಗಳು.
ಸಚಿನ್ ಎಂಬಾತನ ಸ್ಥಿತಿ ಚಿಂತಾಜನಕವಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.