ವಿಧವೆಯೊಂದಿಗೆ ಅಕ್ರಮ ಸಂಬಂಧ; ವ್ಯಕ್ತಿಯನ್ನು ಭೀಕರವಾಗಿ ಥಳಿಸಿ ಹತ್ಯೆಗೈದ ಕುಟುಂಬಸ್ಥರು

ವಿಧವೆಯೊಂದಿಗೆ ಟ್ರಕ್ ಚಾಲಕನೊಬ್ಬ ವಿವಾಹೇತರ ಸಂಬಂಧ ಹೊಂದಿದ್ದ ಕಾರಣ ಆತನನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ. ಬುಧವಾರ ಟ್ರಕ್ ಚಾಲಕ ತನ್ನ ಗೆಳತಿಯನ್ನು ಭೇಟಿಯಾಗಲು ಮಹಿಳೆಯ ಮನೆಗೆ ಬಂದಿದ್ದ. ಇದನ್ನು ಕಂಡ ವಿಧವೆಯ ಮನೆಯವರು, ಮಹಿಳೆಯ ಸೋದರ ಮಾವಂದಿರು ಯುವಕನನ್ನು ಹೊಡೆದು ಕೊಂದಿದ್ದಾರೆ.

ಯುವಕನ ಖಾಸಗಿ ಭಾಗಕ್ಕೆ ಆರೋಪಿಗಳು ತೀವ್ರವಾಗಿ ಗಾಯಗೊಳಿಸಿ ಕೊಲೆ ಮಾಡಿದ ಬಳಿಕ ಪುರುಷನ ಶವವನ್ನು ಮಹಿಳೆಯ ಮನೆಯ ಹೊರಗೆ ಎಸೆದಿದ್ದರು.

ಬಾರ್ಮರ್ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಂನಗರ ಚಕ್ ಧೋಲ್ಕಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸುದ್ದಿ ತಿಳಿದ ತಕ್ಷಣ ರ್ಯಾಪಿಡ್ ಆಕ್ಷನ್ ಸೆಲ್‌ನ ಎಎಸ್ಪಿ ನಜೀಮ್ ಅಲಿ ಪೊಲೀಸ್ ಠಾಣಾಧಿಕಾರಿಯೊಂದಿಗೆ ಘಟನಾ ಸ್ಥಳಕ್ಕೆ ಬಂದರು. ಪೊಲೀಸರು ಎಫ್‌ಎಸ್‌ಎಲ್ ಮತ್ತು ಎಂಒಬಿ ತಂಡಗಳನ್ನು ಸ್ಥಳಕ್ಕೆ ಕರೆಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಇದುವರೆಗೆ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಂನಗರ ಚಕ್ ಧೋಲ್ಕಾ ಗ್ರಾಮದ ನಿವಾಸಿ ಇಮಾಮ್ ಖಾನ್ ಕಳೆದ ಹಲವು ವರ್ಷಗಳಿಂದ ವಿವಾಹಿತ ಮಹಿಳೆ ಲಾಲಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು.

ಇಬ್ಬರ ಮನೆಗಳು ಪರಸ್ಪರ 100 ಮೀಟರ್ ದೂರದಲ್ಲಿವೆ. ಲಾಲಿಯ ಪತಿ ಬಹಳ ಹಿಂದೆಯೇ ತೀರಿಕೊಂಡಿದ್ದರು. ಅಕ್ರಮ ಸಂಬಂಧದ ಬಗ್ಗೆ ಇಮಾಮ್ ಮತ್ತು ಲಾಲಿ ಅವರ ಕುಟುಂಬ ಸದಸ್ಯರ ನಡುವೆ ಜಗಳ ನಡೆದಿತ್ತು. ನಿನ್ನೆ ರಾತ್ರಿ ಇಮಾಮ್ ಲಾಲಿಯ ಮನೆಗೆ ಬಂದಿದ್ದ. ಲಾಲಿಯ ಕುಟುಂಬಸ್ಥರು ಆತನನ್ನು ನೋಡಿದ್ದು ನಂತರ ಕುಟುಂಬದ 5-6 ಜನರು ದೊಣ್ಣೆ ಮತ್ತು ಕಬ್ಬಿಣದ ತಂತಿಯಿಂದ ಇಮಾಮ್ ನನ್ನು ಬರ್ಬರವಾಗಿ ಹೊಡೆದಿದ್ದಾರೆ. ಆರೋಪಿಗಳು ಇಮಾಮ್ ಶವವನ್ನು ಮನೆಯ ಹೊರಗೆ ಎಸೆದು ಪರಾರಿಯಾಗಿದ್ದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಇಮಾಮ್ ಅವರ ಕುಟುಂಬದವರು ಕೂಡ ಸ್ಥಳಕ್ಕೆ ಆಗಮಿಸಿದರು. ತನ್ನ ಸಹೋದರನನ್ನು ಕಬ್ಬಿಣದ ರಾಡ್, ತಂತಿ, ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ಕೊಲೆ ಮಾಡಲಾಗಿದೆ ಎಂದು ಮೃತನ ಸಹೋದರ ಆರೋಪಿಸಿದ್ದಾರೆ. ಮಹಿಳೆ ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಇದು ಮುಖ್ಯ ಸಮಸ್ಯೆಯಾಗಿತ್ತು ಎಂದಿದ್ದಾರೆ. ಕುಟುಂಬದ ಮಾಹಿತಿ ಪ್ರಕಾರ ಮೃತ ಇಮಾಮ್ ವಿವಾಹವಾಗಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read