ನವದೆಹಲಿ: ರೈತರ ಬೆಳೆ ವಿಮೆ ಪಾವತಿ ವಿಳಂಬವಾದಲ್ಲಿ ಸಂಬಂಧಿಸಿದ ಕಂಪನಿಗಳ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಿದ್ದು, ಈ ದಂಡದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಣ್ ಹೇಳಿದ್ದಾರೆ.
ಸಂಸತ್ ನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕುರಿತಾಗಿ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಹಳೆಯ ಬೆಳೆ ವಿಮೆ ಯೋಜನೆಯಲ್ಲಿ ಅನೇಕ ಗೊಂದಲಗಳಿದ್ದವು. ಪ್ರೀಮಿಯ ಮೊತ್ತ ಹೆಚ್ಚಾಗಿತ್ತು. ವಿಮೆ ಹಣ ಪಾವತಿಯಲ್ಲಿ ವಿಳಂಬವಾಗುತ್ತಿತ್ತು. ಮೊದಲು ಕೇವಲ 3.51 ಕೋಟಿ ಅರ್ಜಿ ಬರುತ್ತಿದ್ದವು. ಪ್ರಧಾನಿ ಮೋದಿ ಹೊಸ ಯೋಜನೆ ಪರಿಚಯಿಸಿದ ನಂತರ 8.69 ಕೋಟಿ ಅರ್ಜಿ ಸಲ್ಲಿಕೆಯಾಗಿವೆ ಎಂದು ಹೇಳಿದ್ದಾರೆ.
ಯೋಜನೆಯ ಲಾಭ ಪಡೆದುಕೊಳ್ಳಲು ರೈತರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಸರಳೀಕರಣಗೊಳಿಸಲಾಗುತ್ತಿದೆ. ಬೆಳೆ ವಿಮೆ ಹಣ ಜಮಾ ವಿಳಂಬವಾದಲ್ಲಿ ಕಂಪನಿಗಳಿಗೆ ಶೇಕಡ 12ರಷ್ಟು ದಂಡ ವಿಧಿಸಲಿದ್ದು, ಅದನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.