ಒಲಂಪಿಕ್ ರೇಸ್‌ನಿಂದ ವಿನೇಶ್ ಫೋಗಟ್ ಅನರ್ಹಗೊಳ್ತಿದ್ದಂತೆ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ. ಹರಿಯಾಣ ರಾಜ್ಯ ಚುನಾವಣೆಗೆ ಇದನ್ನು ಎರಡೂ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಲು ಶುರು ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಇದು ಕಾರಣವಾಗಿದೆ.
ರಾಜ್ಯಸಭಾ ಸಂಸದ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಹರಿಯಾಣ ಕಾಂಗ್ರೆಸ್ ಸಂಸದರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ದ್ವೇಷದ ದೊಡ್ಡ ಪಿತೂರಿ ನಡೆಸುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಸುರ್ಜೆವಾಲಾ ಪೋಸ್ಟ್ ಹಾಕಿದ್ದಾರೆ. ಅವರ ಗೆಲುವಿನಿಂದ ಯಾರಿಗೆ ತೊಂದರೆ ಆಗ್ತಿತು? ಹರಿಯಾಣದ ಮಗಳ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಅಧಿಕಾರವನ್ನು ದುರುಪಯೋಗಪಡಿಸಿಕೊಂಡವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಕುಮಾರಿ ಶೆಲ್ಜಾ ಮತ್ತು ದೀಪೇಂದರ್ ಹೂಡಾ ಸೇರಿದಂತೆ ಇತರ ಹರಿಯಾಣ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಮೋದಿ ಸರ್ಕಾರವು ಮಹಿಳಾ ವಿರೋಧಿ ಮತ್ತು ಫ್ಯಾಸಿಸ್ಟ್ ಎಂದು ಅನೇಕ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಸೇರಿದಂತೆ ಪಕ್ಷದ ವರಿಷ್ಠರು ಸಹ ಫೋಗಟ್ ಬೆಂಬಲಕ್ಕೆ ನಿಂತಿದ್ದು, ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.
https://twitter.com/rssurjewala/status/1821142251529015392?ref_src=twsrc%5Etfw%7Ctwcamp%5Etweetembed%7Ctwterm%5E1821142251529015392%7Ctwgr%5Ef637d73235d3bdbf490918f7fab0d91f487fb6a2%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Foneindiaenglish-epaper-dh93a6f960261645e6be32adf8527d670a%2Fvineshphogatsdisqualificationcongressnewammoagainstbjpinharyanaelections-newsid-n625649831