ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 50 ಕೆಜಿ ಚಿನ್ನದ ಪದಕದ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆಗೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ವಿನೇಶ್ ಫೋಗಟ್ ಅವರ ಅನರ್ಹತೆಯನ್ನು ಮರುಪರಿಶೀಲಿಸುವಂತೆ UWWಗೆ WFI ಮೇಲ್ಮನವಿ ಸಲ್ಲಿಸಿದೆ ಎಂದು ‘ತಿಳಿಸಿದ್ದಾರೆ.
ವಿನೇಶ್ ಫೋಗೋಟ್ ಅವರ ಅನರ್ಹತೆಯು ‘ತುಂಬಾ ಆಘಾತಕಾರಿ’ಯಾಗಿದೆ. ಈ ಕಠಿಣ ಸಮಯದಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನದ ಭರವಸೆ ನೀಡಿದ್ದಾರೆ. ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ) ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯು) ಗೆ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ವಿನೇಶ್ ಅವರ ಅನರ್ಹತೆ ತುಂಬಾ ಆಘಾತಕಾರಿಯಾಗಿದೆ. ನಾನು ಒಲಿಂಪಿಕ್ ವಿಲೇಜ್ ಪಾಲಿಕ್ಲಿನಿಕ್‌ನಲ್ಲಿ ವಿನೇಶ್ ಅವರನ್ನು ಭೇಟಿ ಮಾಡಿದ್ದೇನೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್, ಭಾರತ ಸರ್ಕಾರ ಮತ್ತು ಇಡೀ ದೇಶದ ಸಂಪೂರ್ಣ ಬೆಂಬಲದ ಬಗ್ಗೆ ತಿಳಿಸಿದ್ದೇನೆ. ನಾವು ವಿನೇಶ್‌ಗೆ ಎಲ್ಲಾ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.