
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಿಂದ ಹೊರಬಿದ್ದಿರುವ ವೀಡಿಯೊದಲ್ಲಿ ಮೊಸಳೆಯೊಂದು ಹಳ್ಳಿಯ ಬೀದಿಗಳಲ್ಲಿ ತೆವಳುತ್ತಾ ಜನರನ್ನು ಬೆಚ್ಚಿಬೀಳಿಸಿದೆ. ವರದಿಗಳ ಪ್ರಕಾರ ನಂಗಲ್ ಸೋತಿ ಗ್ರಾಮದಲ್ಲಿ ಮೊಸಳೆ ಕಾಣಿಸಿಕೊಂಡಿದೆ.
ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಭೀತಿಗೆ ಕಾರಣವಾಗಿದ್ದರೆ ಓರ್ವ ಯಾವುದೇ ಭಯವಿಲ್ಲದೆ ಮೊಸಳೆಯನ್ನು ಕಾಲಿನಿಂದ ಒದ್ದು ನೋಯಿಸುತ್ತಿರುವುದು ಕಂಡುಬಂದಿದೆ. ಮೊಸಳೆ ಯಾರಿಗೂ ಹಾನಿಯಾಗದಂತೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಆದರೆ ವ್ಯಕ್ತಿಯೊಬ್ಬ ಮೊಸಳೆಯ ಬಳಿಗೆ ಬಂದು ಅದನ್ನು ತನ್ನ ಕಾಲಿನಿಂದ ಒದ್ದಿದ್ದಾನೆ. ಭೀತಿಯಿಂದ ಮೊಸಳೆ ರಕ್ಷಿಸಿಕೊಳ್ಳಲು ಮುಂದೆ ಸಾಗುತ್ತಾ ಹೋಗುತ್ತದೆ.
ಮೊಸಳೆಯನ್ನು ಕಂಡ ಗ್ರಾಮಸ್ಥರು ಘಟನೆಯ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಮೊಸಳೆಯನ್ನು ರಕ್ಷಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ಮೊಸಳೆ ಸುತ್ತಾಡಿತ್ತು ಎನ್ನಲಾಗಿದೆ.