Shocking: ಬಾಂಗ್ಲಾದಲ್ಲಿ ಮಿತಿ ಮೀರಿದ ಕ್ರೌರ್ಯ: ಮೃತನ ಧರ್ಮ ತಿಳಿಯಲು ದೇಹದ ಖಾಸಗಿ ಅಂಗ ಪರೀಕ್ಷಿಸಿದ ಕ್ರೂರಿಗಳು

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ಆರಂಭವಾದ ಪ್ರತಿಭಟನೆ ಈಗ ಹಿಂದೂ ಸಮುದಾಯದ ವಿರುದ್ಧದ ಹಿಂಸಾಚಾರಕ್ಕೆ ತಿರುಗಿದೆ. ಹಿಂದೂಗಳ ಅನೇಕ ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ. ಬಾಂಗ್ಲಾದೇಶದ ಮೂಲಭೂತವಾದಿ ಮುಸ್ಲಿಮರಿಂದ ಅಸಂಖ್ಯಾತ ಹಿಂದೂಗಳು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಹಿಂದೂಗಳ ಮೇಲೆ ಮೂಲಭೂತವಾದಿಗಳ ಕ್ರೌರ್ಯ ಮತ್ತು ದ್ವೇಷವನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಮೂಲಭೂತವಾದಿಗಳು ಸುನ್ನತಿಯನ್ನು ಪರೀಕ್ಷಿಸಿ ಹಿಂದೂಗಳನ್ನು ಕೊಲ್ಲುತ್ತಿದ್ದಾರೆ.

ವೀಡಿಯೊದಲ್ಲಿ, ಮುಸ್ಲಿಂ ಮೂಲಭೂತವಾದಿಗಳು ನೆಲದ ಮೇಲೆ ಬಿದ್ದಿರುವ ಶವವನ್ನು ಪರೀಕ್ಷೆ ಮಾಡ್ತಿದ್ದಾರೆ. ಮೃತನ ಕೈಗೆ ಕೋಳ ಹಾಕಲಾಗಿದ್ದು,  ಮೃತ ದೇಹದ ಸುತ್ತಲೂ ಅನೇಕ ಜನರು ಸೇರುತ್ತಾರೆ. ವೀಡಿಯೋದಲ್ಲಿ ಮುಖ ಕಾಣದ ವ್ಯಕ್ತಿಯೊಬ್ಬ ಮೃತ ವ್ಯಕ್ತಿಯನ್ನು ಕೋಲಿನಿಂದ ಹೊರತೆಗೆದು ಆತನ ಜನನಾಂಗವನ್ನು ಪರೀಕ್ಷಿಸಿ ಆತನಿಗೆ ಸುನ್ನತಿ ಮಾಡಲಾಗಿದೆಯೇ ಎಂದು ಪರಿಶೀಲಿಸುತ್ತಾನೆ. ಈ ಮೃತದೇಹದ ಸುತ್ತ ನಿಂತಿರುವ ಜನರು ಹಿಂದೂ, ಹಿಂದೂ ಎಂದು ಕೂಗಿ ನಗ್ತಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ನಿರಂತರ ರಾಜಕೀಯ ಪ್ರಕ್ಷುಬ್ಧತೆ ಇದೆ. ಈ ಅವಕಾಶವನ್ನು ಬಳಸಿಕೊಂಡು ಇಸ್ಲಾಮಿಕ್ ಮೂಲಭೂತವಾದಿಗಳು ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ. ಆಗಸ್ಟ್ 5, 2024 ರಂದು, ಶೇಖ್ ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಯ ನೆಪದಲ್ಲಿ, ಜಿಹಾದಿಗಳು ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳು, ಅಂಗಡಿಗಳು ಮತ್ತು ದೇವಾಲಯಗಳ ಮೇಲೆ ದಾಳಿ ಮಾಡಿದ್ದರು. ಪ್ರಧಾನಿ ಹುದ್ದೆಗೆ ಹಸೀನಾ ರಾಜೀನಾಮೆ ನೀಡಿದರೂ ಪ್ರತಿಭಟನೆಗಳು ಮುಂದುವರೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read