ನವದೆಹಲಿ : ಇಸ್ರೇಲಿ ಸೈನಿಕರು ಪ್ಯಾಲೆಸ್ಟೀನಿಯನ್ ಒತ್ತೆಯಾಳುಗಳ ಮೇಲೆ ಅತ್ಯಾಚಾರ ಹಲ್ಲೆ ನಡೆಸಿದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಜೈಲಿನ ಸೆಲ್ ನಲ್ಲಿ ಫೆಲೆಸ್ತೀನ್ ಮಹಿಳೆಯರ ಮೇಲೆ ಇಸ್ರೇಲಿ ಸೈನಿಕರಿಂದ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದ್ದು, ಬೆಚ್ಚಿ ಬೀಳಿಸುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಸ್ರೇಲಿ ಸೈನಿಕರು ಒತ್ತೆಯಾಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.
ಕಳೆದ ತಿಂಗಳು ಗಾಝಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್ ದೀಫ್ ಮೃತಪಟ್ಟಿರುವುದನ್ನು ಇಸ್ರೇಲ್ ಸೇನೆ ಗುರುವಾರ ದೃಢಪಡಿಸಿದೆ. ಟೆಹ್ರಾನ್ ನಲ್ಲಿ ಹಮಾಸ್ ನ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ಸ್ವಲ್ಪ ಸಮಯದ ನಂತರ ಈ ವಿಡಿಯೋ ಹೊರಬಂದಿದೆ.