alex Certify Shocking video: 1,257 ಮಹಿಳಾ ಪೇದೆ ಹುದ್ದೆಗಳಿಗೆ 1.11 ಲಕ್ಷ ಅರ್ಜಿ; ಫುಟ್ಪಾತ್ ನಲ್ಲೇ ಮಲಗಿದ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವತಿಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking video: 1,257 ಮಹಿಳಾ ಪೇದೆ ಹುದ್ದೆಗಳಿಗೆ 1.11 ಲಕ್ಷ ಅರ್ಜಿ; ಫುಟ್ಪಾತ್ ನಲ್ಲೇ ಮಲಗಿದ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವತಿಯರು…!

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇದ್ದರೂ ಸಹ ಯುವ ಜನತೆ ಸರ್ಕಾರಿ ಹುದ್ದೆಗಳಿಗೆ ಮುಗಿ ಬೀಳುತ್ತಾರೆ. ಸಾವಿರ ಸಂಖ್ಯೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ ಲಕ್ಷಗಳ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಆಗಮಿಸುತ್ತಾರೆ. ಅಂತವುದೇ ಮತ್ತೊಂದು ಘಟನೆ ಈಗ ನಡೆದಿದೆ.

ಇತ್ತೀಚೆಗೆ ಮುಂಬೈ ನಗರ ಪೊಲೀಸ್ ವತಿಯಿಂದ ಮಹಿಳಾ ಪೇದೆ ಹಾಗೂ ಮಹಿಳಾ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ಸಂಖ್ಯೆ 1,257 ಇತ್ತು. ಆದರೆ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಇದಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಬರೋಬ್ಬರಿ 1.11 ಲಕ್ಷ. ಹೀಗೆ ಅರ್ಜಿ ಸಲ್ಲಿಸಿದವರಿಗೆ ಸೋಮವಾರದಂದು ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಹೀಗಾಗಿ ಸೋಮವಾರದಂದು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಯುವತಿಯರು ಮುಂಬೈ ನಗರಕ್ಕೆ ಆಗಮಿಸಿದ್ದು, ಆದರೆ ಇವರುಗಳ ವಾಸ್ತವ್ಯಕ್ಕೆ ಯಾವುದೇ ವ್ಯವಸ್ಥೆ ಮಾಡಲಾಗಿರಲಿಲ್ಲ. ಹೀಗಾಗಿ ಇವರುಗಳು ಅನಿವಾರ್ಯವಾಗಿ ಫುಟ್ಪಾತ್, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ವಿಶ್ರಾಂತಿ ಪಡೆಯುವಂತಾಗಿತ್ತು. ಈ ವಿದ್ಯಮಾನ ಈಗ ಸಾರ್ವಜನಿಕರು ಹಾಗೂ ಪ್ರತಿಪಕ್ಷ ನಾಯಕರಲ್ಲಿ ಆಕ್ರೋಶ ಉಂಟು ಮಾಡಿದೆ.

ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ವಿಜಯ್, ಮಹಿಳಾ ಪೊಲೀಸ್ ಪೇದೆ ಹುದ್ದೆಗಳ ದೈಹಿಕ ಪರೀಕ್ಷೆಗೆ ಆಗಮಿಸಿದ ಯುವತಿಯರು ಫುಟ್ಬಾತ್ ಗಳಲ್ಲಿ ಮಲಗಿರುವ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಈ ಯುವತಿಯರಿಗೆ ಶೌಚಾಲಯ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಸರ್ಕಾರ ಬೇಜವಾಬ್ದಾರಿ ಮೆರೆದಿದೆ ಎಂದಿರುವ ಅವರು, ಮುಂಬೈನಂತಹ ಮಹಾನಗರದಲ್ಲಿ ಈ ಯುವತಿಯರ ಸುರಕ್ಷತೆಗೆ ಕೈಗೊಂಡ ಕ್ರಮವೇನು ಎಂದು ಪ್ರಶ್ನಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...