ಮಂಗಳೂರು: ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರದವರೆಗೆ ವಾರಕ್ಕೆ ಮೂರು ಬಾರಿ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆಯಾಗಿದೆ.
ಈ ಬಗ್ಗೆ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ರೈಲಿನ ವೇಳಾಪಟ್ಟಿಯನ್ನು ನವೆಂಬರ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತದೆ.
ರೈಲು ಸಂಖ್ಯೆ- 16576 ಮಂಗಳೂರು ಜಂಕ್ಷನ್ನಿಂದ ಬೆಳಿಗ್ಗೆ 11.30 ರ ಬದಲು ಬೆಳಿಗ್ಗೆ 7 ಗಂಟೆಗೆ ಹೊರಟು, ಅದೇ ದಿನ ರಾತ್ರಿ 8:45 ರ ಬದಲು ಸಂಜೆ 4.30ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಬಂಗಾರಪೇಟೆ-ಮಾರಿಕುಪ್ಪಂ ರೈಲು ವೇಳಾಪಟ್ಟಿ:
ರೈಲು ಸಂಖ್ಯೆ 61782 ಬಂಗಾರಪೇಟೆ-ಮಾರಿಕುಪ್ಪಂ ಮೆಮು ಸ್ಪೆಷಲ್ ರೈಲು ಸಂಖ್ಯೆ 01772 ಮಾರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್ ಮತ್ತು ರೈಲು ಸಂಖ್ಯೆ 08396 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ಸ್ಪೆಷಲ್ ರೈಲುಗಳ ವೇಳಾಪಟ್ಟಿಯನ್ನು ಆಗಸ್ಟ್ 8 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ https://swr.indianrailways.gov.in/viewdetail.jsp?lang-o&dcd-7714&id=0,4,268 ಕ್ಕೆ ಕ್ಲಿಕ್ ಮಾಡಿ
ಅಥವಾ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ವೆಬ್ಸೈಟ್ಗೆ (www.enquiry.Indianrail.gov.in) ಭೇಟಿ ನೀಡಿ.