alex Certify ನಾಳೆಯಿಂದ ‘ಶ್ರಾವಣ ಮಾಸ’ ಆರಂಭ, ಅಪ್ಪಿ ತಪ್ಪಿಯೂ ಇಂತಹ ಕೆಲಸ ಮಾಡಬೇಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ‘ಶ್ರಾವಣ ಮಾಸ’ ಆರಂಭ, ಅಪ್ಪಿ ತಪ್ಪಿಯೂ ಇಂತಹ ಕೆಲಸ ಮಾಡಬೇಡಿ..!

ನಾಳೆಯಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ಶ್ರಾವಣ ಮಾಸ ಶಿವನಿಗೆ ಬಹಳ ಪ್ರಿಯವಾಗಿದೆ. ಅದಕ್ಕಾಗಿಯೇ ಶ್ರಾವಣ ಮಾಸದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ.

ಶ್ರಾವಣ ಮಾಸದಲ್ಲಿ ಕೆಲವು ವಿಚಾರ ನಿಷಿದ್ಧವೆಂದು ಪರಿಗಣಿಸಲಾದ ಅಂತಹ ವಿಷಯಗಳು ಯಾವುವು ಎಂದು ತಿಳಿಯೋಣ.

*ಯಾವುದೇ ತುಂಡಾದ ವಿಗ್ರಹವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ, ಆದ್ದರಿಂದ ಶ್ರಾವಣ ಪ್ರಾರಂಭವಾಗುವ ಮೊದಲು, ನೀವು ಮುರಿದ ಅಥವಾ ತುಂಡಾದ ವಿಗ್ರಹಗಳನ್ನು ನದಿಯಲ್ಲಿ ಬಿಡಿ.

*ಶ್ರಾವಣ ಮಾಸದಲ್ಲಿ ನೀವು ನೆಲದ ಮೇಲೆ ಮಲಗಿದರೆ ಮಾಸದಲ್ಲಿ ನೀವು ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದಂತೆ.

*ನಿಮ್ಮ ಮನೆಯಲ್ಲಿ ಆಲ್ಕೋಹಾಲ್ ಮತ್ತು ಸಿಗರೇಟ್ ನಂತಹ ವಸ್ತುಗಳನ್ನು ಸಂಗ್ರಹಿಸಿಡಬೇಡಿ

*ಶ್ರಾವಣ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯನ್ನು ಸಹ ನಿಷೇಧಿಸಲಾಗಿದೆ.

*ಶ್ರಾವಣ ಮಾಸದಲ್ಲಿ ನಾನ್ ವೆಜ್ ಸೇವಿಸದಿರುವುದು ಒಳ್ಳೆಯದು

*ಅಧರ್ಮದ ಕೆಲಸ ಮಾಡಬಾರದು ಮತ್ತು ಮಹಿಳೆಯರ ಬಗ್ಗೆ ಯಾವುದೇ ರೀತಿಯ ತಪ್ಪು ಆಲೋಚನೆಗಳನ್ನು ಹೊಂದಿರಬಾರದು.

*ಈ ಪವಿತ್ರ ಶ್ರಾವಣ ಮಾಸದಲ್ಲಿ ನಿಮ್ಮ ಕೋಪವನ್ನು ನಿಮ್ಮಿಂದ ದೂರವಿಡುವುದು ಶಿವನ ಕೃಪೆಗೆ ಕಾರಣವಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...