ಕೇವಲ 27ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಸೌತಾಂಪ್ಟನ್ ನ ಪುಟ್ಬಾಲ್ ಆಟಗಾರ ಡ್ಯಾನಿ ಸಿಂಗ್ ರಾಥೋರ್ ಅವರ ಕುಟುಂಬ ಹಠಾತ್ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಲು ಇದೀಗ ಡ್ಯಾನಿ ಸಾವಿನ ಬಗ್ಗೆ ಮಾತಾಡಿದೆ.
ಡ್ಯಾನಿ ಸಿಂಗ್ ರಾಥೋರ್ ಮಾರ್ಚ್ 2009 ರಲ್ಲಿ ತಮ್ಮ ಸಾಪ್ತಾಹಿಕ ಫುಟ್‌ಬಾಲ್ ಪಂದ್ಯದ ವೇಳೆ ಮನೆಗೆ ಮರಳುತ್ತಿದ್ದಾಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದರು. ಇದರಿಂದ ಅವರ ಸ್ನೇಹಿತರು ಮತ್ತು ಕುಟುಂಬ ಆಘಾತಕ್ಕೊಳಗಾಯಿತು.
ಸೌತಾಂಪ್ಟನ್‌ನ ಡ್ಯಾನಿ, ತನ್ನ ಸಹೋದರ ಭಾದೂರ್‌ನೊಂದಿಗೆ ಜೀವಿತಾವಧಿಯ ಪ್ರವಾಸಕ್ಕೆ ಹೋಗಲು ಯೋಜಿಸಿದ್ದರು ಆದರೆ ದುರಂತ ಸಂಭವಿಸಿದ್ದರಿಂದ ಆ ಕನಸು ನನಸಾಗಲೇ ಇಲ್ಲ.
15 ವರ್ಷಗಳ ಹಿಂದೆ ಉಂಟಾದ ತನ್ನ ಸಹೋದರನ ಸಾವಿನ ಬಗ್ಗೆ ಮಾತನಾಡುತ್ತಾ, ದಿ ಇಂಡಿಪೆಂಡೆಂಟ್‌ಗೆ ಭಾದೂರ್ (ಈಗ 44) ಹೇಳಿದ್ದೇನೆಂದರೆ, “ನನ್ನ ಸೋದರ ಫಿಟ್ ಮತ್ತು ಆರೋಗ್ಯವಾಗಿದ್ದರು. ಅವರು ವಾರಕ್ಕೆ ಎರಡು ಬಾರಿ ಫುಟ್‌ಬಾಲ್ ಆಡುತ್ತಿದ್ದರು, ಆದ್ದರಿಂದ ಅವರು ನನಗಿಂತ ಆರೋಗ್ಯವಾಗಿದ್ದರು. ಅವರು ಸತ್ತಾಗ ಅದು ನಮಗೆಲ್ಲರಿಗೂ ಸಂಪೂರ್ಣ ಆಘಾತವಾಗಿತ್ತು ” ಎಂದು ಭಾದೂರ್ ಅವರು ಬ್ರಿಟಿಷ್ ಹಾರ್ಟ್ ಫೌಂಡೇಶನ್ (BHF) ನೊಂದಿಗೆ ತಮ್ಮ ಕೆಲಸದ ಭಾಗವಾಗಿ ತಮ್ಮ ಸಹೋದರನ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಪ್ರತಿ ವಾರ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಯುವಕರು ಇಂಗ್ಲೆಂಡ್ ನಲ್ಲಿ ನಲ್ಲಿ ಹಠಾತ್ ಹೃದಯಾಘಾತದಿಂದ ಸಾಯುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನದ ಭಾಗವಾಗಿ ಸೌತಾಂಪ್ಟನ್‌ನಲ್ಲಿ ಡ್ಯಾನಿಯ ನೆನಪಿಗಾಗಿ ಮ್ಯೂರಲ್ ಅನ್ನು ಅನಾವರಣಗೊಳಿಸಲಾಯಿತು ಮತ್ತು ಯುರೋ 2024 ರ ಸಮಯದಲ್ಲಿ ಬರ್ಲಿನ್‌ನಲ್ಲಿ ಅವರ ಚಿತ್ರವನ್ನು ಪ್ರದರ್ಶಿಸಲಾಯಿತು. ಬರ್ಲಿನ್‌ನಲ್ಲಿ ಸೋದರನ ಚಿತ್ರವನ್ನು ನೋಡುವುದು ಸಂತೋಷವಾಗಿದೆ ಎಂದು ಡ್ಯಾನಿ ಸೋದರ ಹೇಳಿದ್ದಾರೆ.
ಹೊಸ ಅಭಿಯಾನದ ಭಾಗವಾಗಿ ದೇಶಾದ್ಯಂತ ಪ್ರಾರಂಭಿಸಲಾದ 12 ರಲ್ಲಿ ಡ್ಯಾನಿಯ ಮ್ಯೂರಲ್ ಸೇರಿದೆ, ಪ್ರತಿ ಚಿತ್ರಕಲೆಯು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರ ಅಥವಾ ಅಭಿಮಾನಿಗಳನ್ನು ಸ್ಮರಿಸುತ್ತದೆ ಎಂದು BHF ನ ಮುಖ್ಯ ಕಾರ್ಯನಿರ್ವಾಹಕ ಡಾ ಚಾರ್ಮೈನ್ ಗ್ರಿಫಿತ್ಸ್ ಹೇಳಿದರು.