alex Certify ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದವನಿಗೆ ಬಿಗ್ ಶಾಕ್; ದುಬಾರಿ ಮೊಬೈಲ್ ಬದಲು ಬಂದಿದ್ದು ಅರ್ಧ ಡಜನ್ ‘ಟೀ ಕಪ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದವನಿಗೆ ಬಿಗ್ ಶಾಕ್; ದುಬಾರಿ ಮೊಬೈಲ್ ಬದಲು ಬಂದಿದ್ದು ಅರ್ಧ ಡಜನ್ ‘ಟೀ ಕಪ್’

ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಹಲವು ಸಂಸ್ಥೆಗಳು ಆನ್ಲೈನ್ ಮೂಲಕ ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳನ್ನು ಮನೆ ಬಾಗಿಲಲ್ಲಿಯೇ ತಲುಪಿಸುತ್ತಾರೆ. ಅಲ್ಲದೆ ಸ್ಪರ್ಧಾತ್ಮಕ ದರದಲ್ಲಿ ದೊರೆಯುವ ಕಾರಣ ಗ್ರಾಹಕರು ಸಹ ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಈ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಆದರೆ ಕೆಲವೊಮ್ಮೆ ಡೆಲಿವರಿಯಲ್ಲಿ ಎಡವಟ್ಟುಗಳು ಸಂಭವಿಸುತ್ತಿದ್ದು, ಅಂತಹ ಪ್ರಕರಣ ಒಂದರ ವಿವರ ಇಲ್ಲಿದೆ.

ಪ್ರಕರಣದ ವಿವರ: ಬೃಹನ್ ಮುಂಬೈ ಸಾರಿಗೆ ಸಂಸ್ಥೆಯಲ್ಲಿ ಉಪ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಮರ್ ಚೌಹಾನ್ ಎಂಬವರು ಜುಲೈ 13ರಂದು ಅಮೆಜಾನ್ ಮೂಲಕ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಮೊಬೈಲ್ ಆರ್ಡರ್ ಮಾಡಿದ್ದು ಇದಕ್ಕಾಗಿ 54, 999 ರೂಪಾಯಿಗಳನ್ನು ಪಾವತಿಸಿದ್ದರು. ಆದರೆ ತಮಗೆ ಪಾರ್ಸೆಲ್ ಬಂದಾಗ ಅದನ್ನು ತೆರೆದು ನೋಡಿ ಹೌಹಾರಿದ್ದಾರೆ.

ಹೌದು, ತಾವು ಆರ್ಡರ್ ಮಾಡಿದ್ದ ಎರಡು ಮೂರು ದಿನಗಳ ಬಳಿಕ ಬಂದ ಪಾರ್ಸೆಲ್ ಅನ್ನು ತೆರೆದು ನೋಡಿದ ಅಮರ್ ಚೌಹಾನ್ ಅವರಿಗೆ ಅದರಲ್ಲಿ ಮೊಬೈಲ್ ಬದಲು ಅರ್ಧ ಡಜನ್ ಟೀ ಕಪ್ ಗಳು ಇರುವುದು ಕಂಡುಬಂದಿದೆ. ಕೂಡಲೇ ಅವರು ಅಮೆಜಾನ್ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಆದರೆ ಅವರಿಂದ ಸಮಂಜಸ ಉತ್ತರ ಸಿಕ್ಕಿಲ್ಲ. ಹೀಗಾಗಿ ಬೇಸತ್ತ ಅವರು ಇದೀಗ ಮುಂಬೈನ ಮಾಹಿಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...