HomeKarnatakaಸಚಿವ ಸಂಪುಟದ ಸಚಿವರೆಲ್ಲರೂ ಸಿದ್ದರಾಮಯ್ಯ ರಕ್ಷಣೆಗೆ ನಿಂತಿದ್ದಾರೆ; ಇವರು ರಾಜ್ಯಪಾಲರಿಗಿಂತ ದೊಡ್ಡವರಾ? ಆರ್. ಅಶೋಕ್ ವಾಗ್ದಾಳಿ

ಸಚಿವ ಸಂಪುಟದ ಸಚಿವರೆಲ್ಲರೂ ಸಿದ್ದರಾಮಯ್ಯ ರಕ್ಷಣೆಗೆ ನಿಂತಿದ್ದಾರೆ; ಇವರು ರಾಜ್ಯಪಾಲರಿಗಿಂತ ದೊಡ್ಡವರಾ? ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಇಡೀ ಕ್ಯಾಬಿನೇಟ್ ಮಂತ್ರಿ ಮಂಡಲವೇ ನಿಂತಿದೆ. ರಾಜ್ಯಪಾಲರ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ನೋಟಿಸ್ ಕೊಟ್ಟಾಗ ಅದರ ಹಕ್ಕು ರಕ್ಷಣೆ ಮಾಡಬೇಕು. ಅದನ್ನು ರಾಜ್ಯಪಾಲರು ಮಾಡಿದ್ದಾರೆ. ರಾಜ್ಯಪಾಲರು ನೀಡಿದ ನೋಟಿಸ್ ಗೆ ಪದ ಬಳಕೆ ಸರಿಯಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ರಾಜ್ಯಪಾಲರಿಗಿಂತ ಇವರು ದೊಡ್ಡವರಾ? ಎಂದು ಪ್ರಶ್ನಿಸಿದ್ದಾರೆ.

ನೋಟಿಸ್ ನೀಡುವಾಗ ತಜ್ಞರ ಅಭಿಪ್ರಾಯ ಪಡೆದೇ ಕೊಟ್ಟಿರುತ್ತಾರೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಮಾಡಿ. ಇದಕ್ಕೆ ಕ್ಯಾಬಿನೆಟ್ ಮೀಟಿಂಗ್ ಕರೆದು ಚರ್ಚಿಸಿ, ರಾಜ್ಯಪಾಲರ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular