alex Certify ಬಸ್ ಪ್ರಯಾಣದ ವೇಳೆ ಸ್ಲೀಪರ್ ಸೀಟ್ ನಿಂದ ಬಿದ್ದು ವ್ಯಕ್ತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣದ ವೇಳೆ ಸ್ಲೀಪರ್ ಸೀಟ್ ನಿಂದ ಬಿದ್ದು ವ್ಯಕ್ತಿ ಸಾವು

ಹಿರಿಯೂರು: ಬಸ್ ಪ್ರಯಾಣದ ವೇಳೆ ಅಪ್ಪರ್ ಸ್ಲೀಪರ್ ಸೀಟ್ ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಬೆಂಗಳೂರಿನಿಂದ ವಿಜಯಪುರ ಜಿಲ್ಲೆ ತಾಳಿಕೋಟೆಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಧರಣೇಶ್(37) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಬೆಂಗಳೂರಿನ ದಾಸನಪಾಳ್ಯ ನಿವಾಸಿಯಾಗಿರುವ ಧರಣೇಶ್ ಶಿಕ್ಷಕಿಯಾಗಿರುವ ತಮ್ಮ ಪತ್ನಿಯನ್ನು ನೋಡಲು ಖಾಸಗಿ ಬಸ್ ನಲ್ಲಿ ತಾಳಿಕೋಟೆಗೆ ಪ್ರಯಾಣಿಸುತ್ತಿದ್ದರು.

ಬಸ್ ನ ಅಪ್ಪರ್ ಸ್ಲೀಪರ್ ಸೀಟ್ ನಲ್ಲಿ ಮಲಗಿದ್ದ ಅವರು ಮುಂಜಾನೆ 3:40ರ ಸುಮಾರಿಗೆ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆ, ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆಗೆ ಅವರು ಮೃತಪಟ್ಟಿದ್ದರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...