HomeKarnatakaಮೋಸದಿಂದ ಮದುವೆಯಾಗಿ ಕಿರುಕುಳ: ಲವ್ ಜಿಹಾದ್ ಆರೋಪ: ವ್ಯಕ್ತಿ ಅರೆಸ್ಟ್

ಮೋಸದಿಂದ ಮದುವೆಯಾಗಿ ಕಿರುಕುಳ: ಲವ್ ಜಿಹಾದ್ ಆರೋಪ: ವ್ಯಕ್ತಿ ಅರೆಸ್ಟ್

ಕಲಘಟಗಿ: ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ವ್ಯಕ್ತಿಯನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಕನಕಗಿರಿಯ ಮುಜಾಹಿದ್ ಖಾನ್ ಬಂಧಿತ ಆರೋಪಿ. 2017ರ ಅಕ್ಟೋಬರ್ ನಲ್ಲಿ ಅಶ್ವಿನಿ ಪದ್ಮರಾಜ್ ಜೈನ್ ಎಂಬುವರನ್ನು ಮದುವೆಯಾಗಿದ್ದ. ಮೋಸ ಮಾಡಿ ಮದುವೆಯಾಗಿ ಕಿರುಕುಳ ನೀಡಿದ್ದಾನೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಿದ್ದಾನೆ. ಇದು ಪ್ರೀತಿಯಲ್ಲ, ಲವ್ ಜಿಹಾದ್ ಉದ್ದೇಶದಿಂದ ಮಾಡಿಕೊಂಡ ಮದುವೆಯಾಗಿದೆ ಎಂದು ಆರೋಪಿಸಿದ್ದಾರೆ.

ತನ್ನ ನಿವಾಸದಲ್ಲಿ ಅವಾಷ್ಯ ಪದಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ತೊಂದರೆ ನೀಡುತ್ತಿರುವುದಾಗಿ ಕಲಘಟಗಿಯ ಅಶ್ವಿನಿ ಪದ್ಮರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಜಾಹಿದ್ ಖಾನ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular