ಸ್ವಾತಂತ್ರ್ಯ ದಿನಾಚರಣೆಯಂದು ಮಹೀಂದ್ರಾ ಆಟೋ ಹೊಸ ಥಾರ್ ROXX ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ SUV ಪನೋರಮಿಕ್ ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡಬಹುದು. ಬಹು ನಿರೀಕ್ಷಿತ ಆಫ್‌ರೋಡ್ SUV ಇದಾಗಿದೆ. ಹಾಗಾಗಿ ಅನೇಕ ಆಧುನಿಕ ಫೀಚರ್‌ಗಳನ್ನು ಕಂಪನಿ ಇದರಲ್ಲಿ ಅಳವಡಿಸಿದೆ. ದೇಶದ ಯುವಕರಿಗೆ ಈ ಹೊಸ ಎಸ್‌ಯುವಿ ಇಷ್ಟವಾಗುವ ನಿರೀಕ್ಷೆಯಿದೆ.
ಆಗಸ್ಟ್ 15ರಂದು ಬಿಡುಗಡೆಯಾಗಲಿರುವ ಹೊಸ ಥಾರ್ ROXXನಲ್ಲಿ ಶಕ್ತಿಯುತವಾದ ಪವರ್ಟ್ರೇನ್ ಕೂಡ ಇರುವ ನಿರೀಕ್ಷೆಯಿದೆ. 10.25 -ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಇದರಲ್ಲಿ ನೋಡಬಹುದು. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ ಪನೋರಮಿಕ್ ಸನ್‌ರೂಫ್ ಕೂಡ ಇದರ ಹೊಸ ಆಕರ್ಷಣೆಯಾಗಲಿದೆ. ಇದು ಮಹೀಂದ್ರ ಸ್ಕಾರ್ಪಿಯೊಗಿಂತ ಹೆಚ್ಚಿನ ಫೀಚರ್‌ಗಳನ್ನು ಹೊಂದಿರಲಿದೆ. ಹೊಸ ಥಾರ್ ROXX ಅನ್ನು ಮಹೀಂದ್ರ ಸ್ಕಾರ್ಪಿಯೋ ಎನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದೆ.
ADAS ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಇದರಲಿ ಕಾಣಬಹುದು. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಜೊತೆಗೆ ಲೇನ್ ಚೇಂಜ್ ಅಸಿಸ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಕಂಪನಿ ಅಳವಡಿಸಿದೆ. 360 ಡಿಗ್ರಿ ಕ್ಯಾಮೆರಾ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸಹ ಈ ಕಾರಿನಲ್ಲಿ ಲಭ್ಯವಿದೆ.
ಪ್ರಸ್ತುತ ಮಹೀಂದ್ರಾ ತನ್ನ ಮುಂಬರುವ SUVಯ ಅಧಿಕೃತ ಬೆಲೆಗಳನ್ನು ಬಹಿರಂಗಪಡಿಸಿಲ್ಲ. ಅಂದಾಜಿನ ಪ್ರಕಾರ ಹೊಸ ಥಾರ್ ROXX ಅನ್ನು 13 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಬಹುದು. ಇದರ ಟಾಪ್ ವೇರಿಯೆಂಟ್ ಬೆಲೆ ಸುಮಾರು 21 ಲಕ್ಷ ರೂಪಾಯಿ ಇರಲಿದೆ. ಮಹೀಂದ್ರ ಥಾರ್‌ನ ಮೂರು ಡೋರ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 11.35 ಲಕ್ಷದಿಂದ ಪ್ರಾರಂಭವಾಗಿ 17.60 ಲಕ್ಷದವರೆಗಿದೆ.