ನವದೆಹಲಿ: ವಿದೇಶ ಪ್ರಯಾಣಕ್ಕೆ ಐಟಿ ಪ್ರಮಾಣ ಪತ್ರ ಎಲ್ಲರಿಗೂ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ವಿದೇಶ ಪ್ರಯಾಣಕ್ಕೆ ಮುನ್ನ ತೆರಿಗೆ ಪಾವತಿಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ ಎಂಬ ಇತ್ತೀಚಿನ ಬಜೆಟ್ ಪ್ರಸ್ತಾಪದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರದಿಂದ ಸ್ಪಷ್ಟನೆ ನೀಡಲಾಗಿದೆ. ಇದು ಎಲ್ಲಾ ನಾಗರಿಕರಿಗೂ ಅನ್ವಯವಾಗುವುದಿಲ್ಲ. ಹಣಕಾಸು ಆಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವವರು ವಿಚಾರಣೆಗೆ ಹಾಜರಾಗಬೇಕಾದ ವ್ಯಕ್ತಿಗಳು ಮತ್ತು 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸಂಪತ್ತು ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮಾತ್ರ ವಿದೇಶ ಪ್ರಯಾಣಕ್ಕೆ ಐಟಿ ಪ್ರಮಾಣ ಪತ್ರ ಕಡ್ಡಾಯಗೊಳಿಸುವ ನಿಯಮ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.
ಹಣಕಾಸು ಮಸೂದೆ 2024 ರಲ್ಲಿ ಹಣಕಾಸು ಸಚಿವಾಲಯವು ಕಪ್ಪುಹಣ ಕಾಯ್ದೆ 2015 ರ ಉಲ್ಲೇಖವನ್ನು ಕಾಯ್ದೆಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಿದೆ. ಪ್ರಸ್ತಾವಿತ ತಿದ್ದುಪಡಿ ಎಲ್ಲರಿಗೂ ಸಂಬಂಧಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.