alex Certify ಪ್ರಯಾಣಿಕರೇ ಗಮನಿಸಿ: ಭೂಕುಸಿತ ಹಿನ್ನೆಲೆ ಇಂದಿನಿಂದ ಆ. 4ರವರೆಗೆ 14 ರೈಲುಗಳ ಸಂಚಾರ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರೇ ಗಮನಿಸಿ: ಭೂಕುಸಿತ ಹಿನ್ನೆಲೆ ಇಂದಿನಿಂದ ಆ. 4ರವರೆಗೆ 14 ರೈಲುಗಳ ಸಂಚಾರ ರದ್ದು

ಬೆಂಗಳೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದ ಎಡಕುಮೇರಿ -ಕಡಗರವಳ್ಳಿ ಬಳಿ ಭೂಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಇಂದಿನಿಂದ ಆ. 4ರವರೆಗೆ  14 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಜುಲೈ 29 ರಿಂದ ಆಗಸ್ಟ್ 3ರವರೆಗೆ ಕೆಎಸ್ಆರ್ ಬೆಂಗಳೂರು -ಕಣ್ಣೂರು ರೈಲು, ಜುಲೈ 30 ರಿಂದ ಆಗಸ್ಟ್ 4ರವರೆಗೆ ಕಣ್ಣೂರು -ಕೆಎಸ್ಆರ್ ಬೆಂಗಳೂರು ರೈಲು, ಜುಲೈ 29 ರಿಂದ ಆಗಸ್ಟ್ 3ರವರೆಗೆ ಕೆಎಸ್ಆರ್ ಬೆಂಗಳೂರು- ಕಾರವಾರ ರೈಲು ಸಂಚಾರ ರದ್ದು ಮಾಡಲಾಗಿದೆ.

ಜುಲೈ 30 ರಿಂದ ಆಗಸ್ಟ್ 4ರವರೆಗೆ ಕಾರವಾರ –ಕೆಎಸ್ಆರ್ ಬೆಂಗಳೂರು ರೈಲು, ಜುಲೈ 29 ರಿಂದ ಆಗಸ್ಟ್ 3ರವರೆಗೆ ಎಸ್ಎಂವಿಟಿ ಬೆಂಗಳೂರು -ಮುರುಡೇಶ್ವರ ರೈಲು ಸಂಚಾರ ರದ್ದಾಗಿದೆ.

ಜುಲೈ 30 ರಿಂದ ಆಗಸ್ಟ್ 4ರವರೆಗೆ ಮುರುಡೇಶ್ವರ -ಎಸ್ಎಂವಿಟಿ ಬೆಂಗಳೂರು, ಜುಲೈ 29 ರಿಂದ ಆಗಸ್ಟ್ 3 ವಿಜಯಪುರ -ಮಂಗಳೂರು ಸೆಂಟ್ರಲ್, ಜುಲೈ 30 ರಿಂದ ಆಗಸ್ಟ್ 4ರವರೆಗೆ ಮಂಗಳೂರು ಸೆಂಟ್ರಲ್ -ವಿಜಯಪುರ ಜುಲೈ 29, 31 ಮತ್ತು ಆಗಸ್ಟ್ 2ರಂದು ಯಶವಂತಪುರ –ಕಾರವಾರ, ಜುಲೈ 30, ಆಗಸ್ಟ್ 1, ಆಗಸ್ಟ್ 3ರಂದು ಕಾರವಾರ -ಯಶವಂತಪುರ ರೈಲು ಸಂಚಾರ ರದ್ದು ಮಾಡಲಾಗಿದೆ.

ಜುಲೈ 30 ಮತ್ತು ಆಗಸ್ಟ್ 1ರಂದು ಯಶವಂತಪುರ -ಮಂಗಳೂರು ಜಂಕ್ಷನ್, ಜುಲೈ 31 ಮತ್ತು ಆಗಸ್ಟ್ 2ರಂದು ಮಂಗಳೂರು ಜಂಕ್ಷನ್ -ಯಶವಂತಪುರ, ಆಗಸ್ಟ್ 3 ಮತ್ತು 4ರಂದು ಯಶವಂತಪುರ -ಮಂಗಳೂರು ಜಂಕ್ಷನ್ ಮಂಗಳೂರು ಜಂಕ್ಷನ್ -ಯಶವಂತಪುರ ರೈಲು ಸೇವೆ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...