‘ಬ್ಯೂಟಿಫುಲ್’ ಎಂಬ ಮೆಲೋಡಿ ಗೀತೆ ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆಯುವುದಲ್ಲದೆ ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿಗೆ ಐಶ್ವರ್ಯ ರಂಗ ರಾಜನ್ ಮತ್ತು ಶ್ರೀನಿಧಿ ಶಾಸ್ತ್ರಿ ಧ್ವನಿಯಾಗಿದ್ದು, ಅಕ್ಷಯ್ ಎಸ್ ರಿಷಬ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಮೇಶ್ ಹಾಗೂ ಶಿವಮ್ಮ ಸಾಹಿತ್ಯ ಬರೆದಿದ್ದಾರೆ.
ಹೊಯ್ಸಳ ಗೌಡ, ಸ್ಪರ್ಶ ಕಾಂತರಾಜ್, ಪ್ರಜ್ವಲ್, ಉಲ್ಲಾಸ್ ಮತ್ತು ಅಭಿ ಈ ಹಾಡಿನ ಪಾತ್ರಧಾರಿಗಳಾಗಿದ್ದು, ಸಂತೋಷ್ ಮಾಯಪ್ಪ ನಿರ್ಮಾಣ ಮಾಡಿದ್ದಾರೆ. ಸುರವಿ ಹಾಗೂ ಸ್ಪೂರ್ತಿ ಕಾವೇರಮ್ಮ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ಸಂಜಯ್ ಅವರ ವೇಷಭೂಷಣ, ಹಾಗೂ ಅಭಿಷೇಕ್ ಎಸ್ ವಿಷ್ಣು ಛಾಯಾಗ್ರಹಣವಿದೆ.