‘ವಿಚ್ಛೇದನ’ ಸುದ್ದಿ ಮಧ್ಯೆ ಅಚ್ಚರಿ ಹುಟ್ಟಿಸಿದ ಅಭಿಷೇಕ್ ಬಚ್ಚನ್ ನಡೆ…..!

ಬಾಲಿವುಡ್‌ ಸ್ಟಾರ್‌ ಜೋಡಿ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಬಚ್ಚನ್‌ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಈ ಮಧ್ಯೆ ಅಭಿಷೇಕ್‌ ಬಚ್ಚನ್‌, ಡಿವೋರ್ಸ್‌ ಪೋಸ್ಟ್‌ ಗೆ ಕಮೆಂಟ್‌ ಮಾಡಿ ಚರ್ಚೆಯನ್ನು ಮತ್ತಷ್ಟು ಬಿಸಿಗೊಳಿಸಿದ್ದರು. ಆದ್ರೆ ಇಬ್ಬರ ಮಧ್ಯೆ ಅಂಥ ಗಲಾಟೆ ಏನೂ ಇಲ್ಲ. ಇಬ್ಬರೂ ಒಂದಾಗಿದ್ದಾರೆ ಎನ್ನುವ ಅನುಮಾನವೊಂದು ಶುರುವಾಗಿದೆ.

ಎರಡು ದಿನಗಳ ಹಿಂದೆ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಒಟ್ಟಿಗಿದ್ದ ಫೋಟೋ ಒಂದು ವೈರಲ್‌ ಆಗಿತ್ತು. ಈಗ ಅಭಿಷೇಕ್‌ ಹೊಸ ಕಾರ್‌ ಸುದ್ದಿ ಮಾಡಿದೆ. ಅಭಿಷೇಕ್‌ ಬಚ್ಚನ್‌, ಅಗಸ್ತ್ಯ ನಂದಾ ಮತ್ತು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಿನ ನಂಬರ್‌ ಪ್ಲೇಟ್‌ ಎಲ್ಲರ ಗಮನ ಸೆಳೆದಿದೆ.

ಅಭಿಷೇಕ್‌ ಹೊಸ ಕಾರಿನ ನಂಬರ್‌ 5050. ಇದು ಐಶ್ವರ್ಯ ರೈ ಪ್ರೀತಿಯ ನಂಬರ್.‌ ಗರ್ಭಿಣಿಯಾಗಿದ್ದಾಗ ಐಶ್ವರ್ಯ ಈ ಕಾರಿನಲ್ಲೇ ಕಾಣಿಸಿಕೊಂಡಿದ್ದರು. ಹಾಗಾಗಿ ಅದು ಐಶ್‌, ಇಷ್ಟದ ನಂಬರ್‌ ಎಂದು ನಂಬಲಾಗಿದೆ. ಈಗ ಅಭಿಷೇಕ್‌ ತಮ್ಮ ಕಾರಿಗೆ ಈ ನಂಬರ್‌ ಪ್ಲೇಟ್‌ ಹಾಕಿಸಿದ್ದು, ಇಬ್ಬರು ವಿಚ್ಛೇದನದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read