ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ 9 ಕ್ರೀಡಾಪಟುಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು. ಅಶ್ವಿನಿ ಪೊನ್ನಪ್ಪ, ಅದಿತಿ ಅಶೋಕ್, ದಿನಿಧಿ ದೇಸಿಂಗೂ, ಎಂ.ಆರ್. ಪೂವಮ್ಮ, ಅರ್ಚನಾ ಕಾಮತ್, ಶ್ರೀಹರಿ ನಟರಾಜ್, ರೋಹನ್ ಬೋಪಣ್ಣ, ನಿಶಾಂತ್ ದೇವ್, ಮಿಜೋ ಚಾಕೆ ಅವರಿಗೆ ಪ್ರೋತ್ಸಾಹಧನ ನೀಡಲಾಗುವುದು.
ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹದಾಯಕವಾಗಿ 5 ಲಕ್ಷ ರೂಪಾಯಿ ಮಂಜೂರಿಗೆ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ. ಗೋವಿಂದರಾಜು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಜುಲೈ 26 ರಿಂದ ಪ್ಯಾರಿಸ್ ನಲ್ಲಿ ಒಲಂಪಿಕ್ಸ್ ನಡೆಯಲಿದೆ. ರಾಜ್ಯದ 9 ಕ್ರೀಡಾಪಟುಗಳಿಗೆ ಅಸೋಸಿಯೇಷನ್ ನಿಂದ ನೆರವು ನೀಡಲಾಗುವುದು.