ಬೆಂಗಳೂರು: ಬಿಬಿಎಂಪಿ ವತಿಯಿಂದ ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಲಾಗಿದೆ. ಬಿಬಿಎಂಪಿಯ ಹೊಸ ಜಾಹೀರಾತು ಕರುಡು ನೀತಿಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
ಸರ್ಕಾರ ರಾಜ್ಯ ಪತ್ರದ ಮೂಲಕ ಕರಡು ಪ್ರತಿ ಬಿಡುಗಡೆ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 30 ದಿನ ಕಾಲಾವಕಾಶ ನೀಡಲಾಗಿದೆ.
ಬಿಬಿಎಂಪಿ ಹೊಸ ಜಾಹೀರಾತು ನೀತಿಯ ಪ್ರಮುಖ ಅಂಶಗಳು
ಜಾಹೀರಾತು ಟೆಂಡರ್‌ನಲ್ಲಿ ಭಾಗವಹಿಸಲು ಪಾಲಿಕೆಯಲ್ಲಿ ನೋಂದಣಿ ಕಡ್ಡಾಯವಾಗಿದೆ.
ಟೆಂಡರ್ ನಲ್ಲಿ ಭಾಗವಹಿಸಲು ನೋಂದಣಿ ಶುಲ್ಕ 5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ
ಒಮ್ಮೆ ನೋಂದಣಿ ಪಡೆದವರು ಪ್ರತಿ ಮೂರು ವರ್ಷಕ್ಕೆ ನವೀಕರಣ ಮಾಡಬೇಕು.
ರಸ್ತೆ, ಸರ್ಕಲ್, ವಲಯವಾರು ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್ ನೀಡಲಾಗುವುದು.
ರಸ್ತೆಯ ಅಗಲ, ಸರ್ಕಲ್ ಗಾತ್ರಕ್ಕೆ ಅನುಗುಣವಾಗಿ ಜಾಹೀರಾತು ಫಲಕಕ್ಕೆ ಅವಕಾಶ ನೀಡಲಾಗುತ್ತದೆ.
ಒಂದು ಜಾಹೀರಾತು ಫಲಕದಿಂದ ಮತ್ತೊಂದಕ್ಕೆ 100 ಮೀಟರ್ ಅಂತರ ಕಡ್ಡಾಯವಾಗಿದೆ.
ಜಾಹೀರಾತು ಫಲಕ ಅಳವಡಿಕೆಗೆ ಸಬ್ ರಿಜಿಸ್ಟ್ರಾರ್ ದರ ಆಧರಿಸಿ ಶುಲ್ಕ ವಿಧಿಸಲಾಗುತ್ತದೆ.
ಮಾರ್ಗಸೂಚಿಯಂತೆ ಹೆಚ್ಚಿನ ಬಿಡ್ ಮಾಡಿದವರಿಗೆ ಗುತ್ತಿಗೆ ನೀಡಲಾಗುವುದು.
ನೂತನ ಜಾಹೀರಾತು ನೀತಿಯಲ್ಲಿ ಪರಿಸರ ಸ್ನೇಹ ವಸ್ತುಗಳ ಬಳಕೆ ಮಾಡಲಾಗುವುದು.
ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ ಕಲ್ಪಿಸಲಾಗಿದೆ.
ಖಾಸಗಿ ಕಟ್ಟಡ ಜಾಹೀರಾತಿಗೆ ನೀಡಿ ಬಾಡಿಗೆ ಪಡೆಯಬಹುದು.
ಹೊಸ ಜಾಹೀರಾತು ನೀತಿಯಿಂದ 1500 ಕೋಟಿ ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ.
ವಿಧಾನಸೌಧ, ಹೈಕೋರ್ಟ್, ರಾಜಭವನ ರಸ್ತೆ, ಕುಮಾರಕೃಪಾ ರಸ್ತೆ, ಅಂಬೇಡ್ಕರ್ ಬೀದಿ, ನೃಪತುಂಗ ರಸ್ತೆ ಸೇರಿದಂತೆ ಹಲವು ಕಡೆ ಜಾಹೀರಾತು ನಿಷೇಧಿಸಲಾಗಿದೆ.
ಆಟೋ, ಬಸ್, ಮೆಟ್ರೋಪಿಲ್ಲರ್, ಮೆಟ್ರೋ ರೈಲ್ವೆ, ಟ್ಯಾಕ್ಸಿ, ಬಸ್ ಶೆಲ್ಟರ್ ಮೇಲೆ ಜಾಹೀರಾತಿಗೆ ಅವಕಾಶ ಕಲ್ಪಿಸಲಾಗಿದೆ.