alex Certify ಹೆತ್ತವರ ವಿಚ್ಛೇದನದಿಂದ ಮಕ್ಕಳ ಮೇಲಾಗುತ್ತೆ ಇಂಥಾ ಅಪಾಯಕಾರಿ ಪರಿಣಾಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆತ್ತವರ ವಿಚ್ಛೇದನದಿಂದ ಮಕ್ಕಳ ಮೇಲಾಗುತ್ತೆ ಇಂಥಾ ಅಪಾಯಕಾರಿ ಪರಿಣಾಮ….!

ಆಧುನಿಕ ಬದುಕಿನಲ್ಲಿ ಸಂಬಂಧಗಳ ಅರ್ಥವೂ ಬದಲಾಗಿದೆ. ಈ ಹಿಂದೆ ಜನರು ಕೆಲಸ ಮತ್ತು ಹಣಕ್ಕಿಂತ ಸಂಬಂಧಗಳನ್ನು ಗೌರವಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧವನ್ನು ಉಳಿಸಲು ವಿಶೇಷ ಪ್ರಯತ್ನಗಳನ್ನು ಮಾಡುವುದಿಲ್ಲ. ಇದರಿಂದಾಗಿ ಕೌಟುಂಬಿಕ ಸಂಬಂಧಗಳು ಮುರಿದು ಬೀಳುತ್ತಿವೆ.

ಮಕ್ಕಳ ಮಾನಸಿಕ ಆರೋಗ್ಯಕ್ಕೆ ಮಾರಕ ಹೆತ್ತವರ ವಿಚ್ಛೇದನ!

ಕಳೆದ ಕೆಲವು ವರ್ಷಗಳಲ್ಲಿ ವಿಚ್ಛೇದನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಿಚ್ಛೇದನವು ಪೋಷಕರನ್ನು ಬೇರ್ಪಡಿಸುವುದು ಮಾತ್ರವಲ್ಲದೆ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪೋಷಕರ ಅಗಲಿಕೆ ಮಕ್ಕಳನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ಇದು ಅವರ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಉಂಟುಮಾಡುತ್ತದೆ.

ಪೋಷಕರ ನಡುವೆ ವಿಚ್ಛೇದನವಾದರೆ ಮಕ್ಕಳಿಗೆ ತುಂಬಾ ಕಷ್ಟದ ಪರಿಸ್ಥಿತಿ ಅದು. ಚಿಕ್ಕ ವಯಸ್ಸಿನ ಕಾರಣದಿಂದಾಗಿ ಮಕ್ಕಳು ಆರಂಭದಲ್ಲಿ ತಮ್ಮ ಹೆತ್ತವರ ನಡುವಿನ ಸಂಘರ್ಷವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿಚ್ಛೇದನ ಸಂಭವಿಸಿದಾಗ ಅದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮಕ್ಕಳಲ್ಲಿ ಖಿನ್ನತೆ!

ಮಗುವಿಗೆ ತಂದೆ-ತಾಯಿ ಇಬ್ಬರೂ ಬಹಳ ಮುಖ್ಯ. ಹೆತ್ತವರೊಂದಿಗೆ ಅವರು ತುಂಬಾ ಸುರಕ್ಷಿತವಾಗಿರುತ್ತಾರೆ. ಆದರೆ ಅದೇ ಪೋಷಕರು ವಿಚ್ಛೇದನ ಪಡೆದಾಗ ಇಬ್ಬರಲ್ಲಿ ಯಾರೊಂದಿಗಾದರೂ ವಾಸಿಸುವ ಆಯ್ಕೆಯನ್ನು ನೀಡಲಾಗುತ್ತದೆ. ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಗು ಖಿನ್ನತೆ ಮತ್ತು ಆತಂಕಕ್ಕೆ ಬಲಿಯಾಗಬಹುದು.

ಹೆತ್ತವರ ವಿಚ್ಛೇದನದಿಂದ ಮಕ್ಕಳಲ್ಲಿ ಕೀಳರಿಮೆ ಕಾಣಿಸಿಕೊಳ್ಳಬಹುದು. ಅವರು ಸ್ನೇಹಿತರು ಮತ್ತು ಸಮಾಜದಿಂದ ದೂರವಾಗಲು ಪ್ರಾರಂಭಿಸುತ್ತಾರೆ. ಇತರರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಭಯಪಡುತ್ತಾರೆ. ಪರಿಣಾಮ ಪ್ರತ್ಯೇಕವಾಗಿ, ಒಬ್ಬಂಟಿಯಾಗಿ ಉಳಿಯಲು ಪ್ರಯತ್ನಿಸುತ್ತಾರೆ.

ಮಗುವಿನ ಮೇಲಾಗುವ ಪರಿಣಾಮವನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ವಿಚ್ಛೇದನದ ನಂತರವೂ ನಿನ್ನ ಜೊತೆಗಿರುತ್ತೇವೆ ಎಂಬ ಭರವಸೆಯನ್ನು ಮಗುವಿನಲ್ಲಿ ಮೂಡಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...