ರೈತನಿಗೆ ಕ್ಷಮೆ ಕೇಳಿ ಸನ್ಮಾನಿಸಿದ ಬೆಂಗಳೂರಿನ ಜಿ.ಟಿ ಮಾಲ್, ಅವಮಾನ ಮಾಡಿದ ವಾಚ್ ಮೆನ್ ಸಸ್ಪೆಂಡ್ |Video

ಬೆಂಗಳೂರು : ಪಂಚೆಯುಟ್ಟು ಬಂದ ಎಂಬ ಕಾರಣಕ್ಕೆ ರೈತನಿಗೆ ಅವಮಾನ ಮಾಡಿದ ಜಿಟಿ ಮಾಲ್ ಇದೀಗ ರೈತನಿಗೆ ಕ್ಷಮೆಯಾಚಿಸಿ ಸನ್ಮಾನ ಮಾಡಿದೆ.

ಬೆಂಗಳೂರಿನ ಮಾಗಡಿ ರೋಡ್ ಟೋಲ್ ಗೇಟ್ ಬಳಿಯಿರುವ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಬಂದಿದ್ದ ಹಾವೇರಿ ಮೂಲದ ರೈತರೊಬ್ಬರನ್ನು ಭದ್ರತಾ ಸಿಬ್ಬಂದಿ ತಡೆದು ಪ್ರವೇಶ ನಿರಾಕರಿಸಿದ್ದರು. ಪ್ರತಿಭಟನೆ, ಆಕ್ರೋಶದ ಬಳಿಕ ಜಿ.ಟಿ ಮಾಲ್ ರೈತರಿಗೆ ಕ್ಷಮೆಯಾಚಿಸಿ ಸನ್ಮಾನ ಮಾಡಿದೆ. ಹಾಗೂ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ.

ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬುವರ ತಂದೆ ಮೂಲತಃ ರೈತರಾಗಿದ್ದು, ಬೆಂಗಳೂರಿಗೆ ಮಗನ ಮನೆ ( ನಾಗರಾಜ್) ಮನೆಗೆ ಬಂದಿದ್ದರು. ಅಂತೆಯೇ ತಂದೆಯನ್ನು ಸಿನಿಮಾ ನೋಡಲು ಮಗ ನಾಗರಾಜ್ ಜಿಟಿ ಮಾಲ್ ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ಉಟ್ಟಿದ್ದಾರೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಾರೆ. ಎಷ್ಟೇ ವಾದ ಮಾಡಿದ್ರೂ ಭದ್ರತಾ ಸಿಬ್ಬಂದಿ ಮಾಲ್ ನ ಒಳಗೆ ಬಿಡಲಿಲ್ಲ. ಇದರಿಂದ ನೊಂದ ನಾಗರಾಜ್ ವಿಡಿಯೋ ಮಾಡಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶಗೊಂಡು ಮಾಲ್ ಗೆ ಮುತ್ತಿಗೆ ಹಾಕಿದ್ದಾರೆ.

ಘಟನೆಯನ್ನು ವಿರೋಧಿಸಿ ಕನ್ನಡ ಸಂಘಟನೆಯ ಕಾರ್ಯಕರ್ತರು ಪಂಚೆಯುಟ್ಟು ಬೆಳಗ್ಗೆ ಮಾಲ್ ಗೆ ಜಮಾಯಿಸಿದ್ದರು. ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಹಾಗೂ ಮತ್ತಿತರರು ಪಂಚೆ ಧರಿಸಿ ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು.

https://twitter.com/i/status/1813499816690831836

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read