alex Certify ವಿಮಾ ಕಾಯ್ದೆಗೆ ತಿದ್ದುಪಡಿ: ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾ ಕಾಯ್ದೆಗೆ ತಿದ್ದುಪಡಿ: ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ

ನವದೆಹಲಿ: ಎಲ್ಲಾ ನಾಗರೀಕರಿಗೂ ವಿಮಾ ಸೌಲಭ್ಯ ಕಲ್ಪಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಜುಲೈ 22 ರಿಂದ ಆರಂಭವಾಗಲಿರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ವಿಮಾ ಕಾಯ್ದೆ 1938ಕ್ಕೆ ತಿದ್ದುಪಡಿ ತರುವ ಸಂಬಂಧ ಮಸೂದೆ ಮಂಡಿಸುವ ಸಾಧ್ಯತೆ ಇದೆ.

ಬಂಡವಾಳ ಹೂಡಿಕೆ ನಿಯಮಾವಳಿಯಲ್ಲಿ ಬದಲಾವಣೆ, ಋಣಾತ್ಮಕ ಪರಿಹಾರ ಕುರಿತ ಮಾನದಂಡದಲ್ಲಿ ಸಡಿಲಿಕೆ, ಮಧ್ಯವರ್ತಿಗಳು ಒಂದು ಬಾರಿ ನೋಂದಣಿ, ವಿಮಾ ಕಂಪನಿಗಳು ಮತ್ತು ಇತರೆ ಹಣಕಾಸು ಸೇವೆ ಒದಗಿಸುವ ಬಗ್ಗೆ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಬ್ಯಾಂಕಿಂಗ್ ಮಾದರಿಯಲ್ಲಿ ವಿಮಾ ವಲಯದಲ್ಲಿಯೂ ವರ್ಗೀಕರಣಕ್ಕೆ ನಿರ್ಧರಿಸಲಾಗಿದೆ. ಜೀವ ವಿಮಾ ಕಾಯ್ದೆಯ ಪ್ರಕಾರ ಜೀವವಿಮೆ ಒದಗಿಸುವ ಕಂಪನಿ ಸಾಮಾನ್ಯ ಅಥವಾ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಅವಕಾಶ ಇಲ್ಲ. ಸಾಮಾನ್ಯ ವಿಮೆ ಸೌಲಭ್ಯ ಒದಗಿಸುವ ಕಂಪನಿಗಳು ಆರೋಗ್ಯ, ವಾಹನ, ಅಗ್ನಿ ಅವಘಡ ಸೇರಿ ಇತರೆ ಅವಘಡಗಳಿಗೆ ವಿಮೆ ಸೌಲಭ್ಯವನ್ನಷ್ಟೇ ಒದಗಿಸಲು ಅವಕಾಶವಿದೆ. ಒಂದೇ ಕಂಪನಿಗೆ ಜೀವವಿಮೆ, ಸಾಮಾನ್ಯ ಅಥವಾ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಸಂಯೋಜಿತ ಪರವಾನಿಗೆ ನೀಡುವಂತಿಲ್ಲ ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳಲ್ಲಿ ಹೇಳಲಾಗಿದೆ.

ತಿದ್ದುಪಡಿ ಮಸೂದೆ ಕರಡಿ ಸಿದ್ದವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ ಅಧಿವೇಶನದಲ್ಲಿ ಮಂಡನೆ ಮಾಡಲು ಹಣಕಾಸು ಮಂತ್ರಾಲಯ ಸಿದ್ಧತೆ ನಡೆಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...