‘ಸಿ’ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಮಾಡಲಿದ್ದಾರೆ ನಟಿ ಸೋನು ಗೌಡ 12-07-2024 7:11PM IST / No Comments / Posted In: Featured News, Live News, Entertainment ಕಿರಣ್ ಸುಬ್ರಮಣಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಸಿ’ ಚಿತ್ರದ ‘ಕಂದ ಕಂದ’ ಎಂಬ ತಂದೆ ಮಗಳ ಕುರಿತ ಬ್ಯೂಟಿಫುಲ್ ಮೆಲೋಡಿ ಹಾಡು ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಇದೀಗ ಈ ಸಿನಿಮಾ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಲಿದ್ದು, ನಟಿ ಸೋನು ಗೌಡ ಪೋಸ್ಟರ್ ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಈ ಚಿತ್ರವನ್ನು ಎಜಿಎಸ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎ ಜಿ ಸುಬ್ರಮಣಿ ನಿರ್ಮಾಣ ಮಾಡಿದ್ದು,ಕಿರಣ್ ಸುಬ್ರಮಣಿ ಸೇರಿದಂತೆ ಸಾನ್ವಿ , ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಮಜಾಭಾರತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲ ನಾದನ್ ತಾರಾ ಬಳಗದಲ್ಲಿದ್ದಾರೆ. ಎಬಿ ಮುರಳಿಧರನ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ಸುಂದರ್ ರಾವ್ ಸಂಕಲನ, ಗೀತಾ ನೃತ್ಯ ನಿರ್ದೇಶನ, ಶಿವು ಎಸ್ ಸಾಹಸ ನಿರ್ದೇಶನ, ಹಾಗೂ ನವೀನ್ ಸೂರ್ಯ ಮತ್ತು ವೀರೇಶ್ ಕುಮಾರ್ ಛಾಯಾಗ್ರಹಣವಿದೆ. Tomorrow at 6 PM, Actress Sonu Gowda will unveil the official movie poster for "C." Don’t miss this exciting reveal! 🎬 #SonuGowda #OfficialPosterRelease #CinematicReveal #A2music pic.twitter.com/lEPiFxmWRe — A2 Music (@A2MusicSouth) July 11, 2024