ವಿಯೆನ್ನಾ : ಆಸ್ಟ್ರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಯೆನ್ನಾದ ಫೆಡರಲ್ ಚಾನ್ಸಲೆರಿಯಲ್ಲಿ ಬುಧವಾರ ಸಾಂಪ್ರದಾಯಿಕ ಗಾರ್ಡ್ ಆಫ್ ಹಾನರ್ ನೀಡಿ ಬರಮಾಡಿಕೊಂಡರು.
ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹ್ಯಾಮರ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಫೆಡರಲ್ ಚಾನ್ಸಲೆರಿಯಲ್ಲಿ ಅತಿಥಿಪುಸ್ತಕಕ್ಕೆ ಸಹಿ ಹಾಕಿದರು.ಎರಡು ದಿನಗಳ ರಷ್ಯಾ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಪ್ರಧಾನಿ ಮೋದಿ ಬುಧವಾರ (ಸ್ಥಳೀಯ ಸಮಯ) ಮಾಸ್ಕೋದಿಂದ ಆಸ್ಟ್ರಿಯಾಕ್ಕೆ ಆಗಮಿಸಿದರು.ಇಲ್ಲಿಗೆ ಆಗಮಿಸಿದ ಭಾರತದ ಪ್ರಧಾನಮಂತ್ರಿಯವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ ಬರ್ಗ್ ಸ್ವಾಗತಿಸಿದರು. ಆಸ್ಟ್ರಿಯಾದಲ್ಲಿನ ಭಾರತೀಯ ರಾಯಭಾರಿ ಶಂಭು ಕುಮಾರನ್ ಕೂಡ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇದು ಆಸ್ಟ್ರಿಯಾಕ್ಕೆ ಪ್ರಧಾನಿ ಮೋದಿಯವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ ಎಂದರು.
PM Modi receives Guard of Honour in Vienna
Read @ANI Story | https://t.co/ORWHKuHjvF#PMModi #Austria #Vienna #KarlNehammer pic.twitter.com/Mz6SCKKqh7
— ANI Digital (@ani_digital) July 10, 2024