alex Certify ರಾತ್ರಿ ನಾವು ಮಾಡುವ ಈ ತಪ್ಪುಗಳೇ ತೂಕ ಹೆಚ್ಚಾಗಲು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ನಾವು ಮಾಡುವ ಈ ತಪ್ಪುಗಳೇ ತೂಕ ಹೆಚ್ಚಾಗಲು ಕಾರಣ

ಅನೇಕರು ತಡರಾತ್ರಿ ಊಟ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ರಾತ್ರಿಯ ಊಟವು ಆರೋಗ್ಯದ ಜೊತೆಗೆ ತೂಕದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. ರಾತ್ರಿ ಊಟದ ಸಮಯದಲ್ಲಿ ಮಾಡುವ ಕೆಲವೊಂದು ತಪ್ಪುಗಳು ತೂಕವನ್ನು ಹೆಚ್ಚಿಸಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ರಾತ್ರಿ ಈ ತಪ್ಪುಗಳನ್ನು ಮಾಡಬೇಡಿ.

ಮೊದಲನೆ ತಪ್ಪು: ಕೆಲವರಿಗೆ ರಾತ್ರಿ ಊಟವಾದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಮಾಡುವುದರಿಂದ ತೂಕ ಹೆಚ್ಚಾಗಬಹುದು. ಕಾಫಿಯಲ್ಲಿರುವ ಕೆಫೀನ್‌ನಿಂದಾಗಿ ಇದು ಸಂಭವಿಸುತ್ತದೆ. ಕೆಫೀನ್‌ ನಿದ್ದೆಗೆ ಅಡ್ಡಿಮಾಡುತ್ತದೆ. ನಿದ್ದೆಯ ಕೊರತೆಯ ಪರಿಣಾಮ ತೂಕದ ಮೇಲಾಗುತ್ತದೆ.

ಎರಡನೇ ತಪ್ಪು : ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ರಾತ್ರಿ ಇದನ್ನು ಸೇವಿಸುವುದು ಹಾನಿಕಾರಕ. ಇದರಿಂದ ತೂಕ ಹೆಚ್ಚಾಗುತ್ತದೆ. ಏಕೆಂದರೆ ಗ್ರೀನ್‌ ಟೀ ಜೀರ್ಣಾಂಗ ವ್ಯವಸ್ಥೆಯು ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

ಮೂರನೇ ತಪ್ಪು: ನೀರು ಕುಡಿಯುವುದು ಕೆಟ್ಟ ಅಭ್ಯಾಸವಲ್ಲ. ಆದರೆ ರಾತ್ರಿ ಊಟವಾದ ತಕ್ಷಣ ಅದನ್ನು ಸೇವಿಸುವುದು ದೇಹಕ್ಕೆ ಅಪಾಯಕಾರಿ. ಆಯುರ್ವೇದದ ಪ್ರಕಾರ ಊಟದ ಮೊದಲು ಮತ್ತು ನಂತರ ನಿರ್ದಿಷ್ಟ ಅವಧಿಯವರೆಗೆ ನೀರನ್ನು ಕುಡಿಯಬಾರದು. ತಕ್ಷಣ ಕುಡಿದರೆ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡಚಣೆಯಾಗುತ್ತದೆ. ಆಹಾರ ಸೇವಿಸಿ 30 ನಿಮಿಷಗಳ ನಂತರ ನೀರು ಕುಡಿಯಬೇಕು.

ನಾಲ್ಕನೇ ತಪ್ಪು:  ರಾತ್ರಿಯ ಊಟವಾದ ತಕ್ಷಣ ಹೆಚ್ಚಿನ ಜನರು ಮಲಗಿಬಿಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಆಹಾರ ಸರಿಯಾಗಿ ಜೀರ್ಣವಾಗಬೇಕೆಂದರೆ 10-15 ನಿಮಿಷಗಳ ಕಾಲ ನಡೆಯಬೇಕು. ಕಳಪೆ ಜೀರ್ಣಕ್ರಿಯೆಯಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯ ಜೊತೆಗೆ ತೂಕವೂ ಹೆಚ್ಚಾಗುತ್ತದೆ.

ಐದನೇ ತಪ್ಪು:  ಊಟದ ನಂತರ ಸಿಹಿ ತಿನ್ನುವ ಪದ್ಧತಿ ಭಾರತದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ತೃಪ್ತಿಯ ಭಾವನೆಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದರೆ ವಾಸ್ತವದಲ್ಲಿ  ರಾತ್ರಿ ಊಟದ ನಂತರ ಸಿಹಿತಿಂಡಿಗಳನ್ನು ಸೇವಿಸಬಾರದು.  ರಾತ್ರಿಯಲ್ಲಿ ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...