ಈ ಬಾರಿಯ ವಿಶ್ವಕಪ್ ಕಿರೀಟವನ್ನು ‘ಟೀಮ್ ಇಂಡಿಯಾ’ ತನ್ನ ಮುಡಿಗೇರಿಸಿಕೊಂಡಿದ್ದು, ಭಾರತಕ್ಕೆ ಬಂದಿಳಿದ ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆಟಗಾರರಿಗೆ ಅಭಿನಂದಿಸಿ ಆತಿಥ್ಯ ನೀಡಿದ್ದರು. ಟೀಮ್ ಇಂಡಿಯಾ ತಂಡ ಬಳಿಕ ಮುಂಬೈಗೆ ಬಂದಿದ್ದು, ಅದ್ದೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗಿತ್ತು.
ಇದರ ಮಧ್ಯೆ ಬಿಸಿಸಿಐ, ವಿಶ್ವ ಕಪ್ ವಿಜೇತ ತಂಡಕ್ಕೆ 125 ಕೋಟಿ ರೂಪಾಯಿಗಳ ಬೋನಸ್ ಘೋಷಿಸಿದ್ದು, ತಂಡದ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ, ಮುಖ್ಯ ಕೋಚ್ ಗೆ 5 ಕೋಟಿ ರೂಪಾಯಿ, ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಹಾಗೂ ಇತರೆ ಸಹಾಯಕರಿಗೆ ತಲಾ 2.5 ಕೋಟಿ ರೂಪಾಯಿ ಹಾಗೂ ತಂಡದ ಟ್ರಾವೆಲಿಂಗ್ ರಿಸರ್ವ್ ಆಟಗಾರರಿಗೆ ತಲಾ 1 ಕೋಟಿ ರೂಪಾಯಿ ನೀಡಲು ನಿರ್ಧರಿಸಿತ್ತು.
ಆದರೆ ಹೃದಯವಂತನೆಂದೇ ಹೆಸರಾಗಿರುವ ರಾಹುಲ್ ದ್ರಾವಿಡ್ ಅವರು ತಮಗೆ 5 ಕೋಟಿ ರೂಪಾಯಿಗಳ ಬದಲು ಸಹಾಯಕ ಸಿಬ್ಬಂದಿಗಳಿಗೆ ನೀಡುವಂತೆ 2.5 ಕೋಟಿ ರೂಪಾಯಿಗಳು ಮಾತ್ರ ಪಡೆಯುತ್ತೇನೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಈ ನಡೆ ಈಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅದೆಷ್ಟು ಬಾರಿ ನಮ್ಮ ಹೃದಯ ಗೆಲ್ಲುತ್ತೀರಿ ಎಂದು ಹಾಡಿ ಹೊಗಳಿದ್ದಾರೆ.