HomeCrimeviral video: ಅರೆ ಕ್ಷಣದಲ್ಲಿ ಕೈಚಳಕ ತೋರಿದ ಖದೀಮರು… ವಿಡಿಯೋ ನೋಡಿ ಭಯಗೊಂಡ ಜನ

viral video: ಅರೆ ಕ್ಷಣದಲ್ಲಿ ಕೈಚಳಕ ತೋರಿದ ಖದೀಮರು… ವಿಡಿಯೋ ನೋಡಿ ಭಯಗೊಂಡ ಜನ

ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಹಾಡಹಗಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಾಜಿಯಾಬಾದ್‌ನ ಇಂದಿರಾಪುರಂನ ವಸುಂಧರಾದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆ ಅಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೈಕ್‌ ನಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ವೀಡಿಯೊವನ್ನು @SachinGuptaUP ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅರೆ ಕ್ಷಣದಲ್ಲಿ ಈ ಘಟನೆ ನಡೆದು ಹೋಗುತ್ತದೆ. ಮಹಿಳೆ ನಡೆದುಕೊಂಡು ಹೋಗ್ತಿದ್ರೆ, ವೇಗವಾಗಿ ಬಂದ ದುಷ್ಕರ್ಮಿಗಳು ಆಕೆ ಕತ್ತಿಗೆ ಕೈ ಹಾಕಿ ಸರ ಎಳೆಯುತ್ತಾರೆ. ಮಹಿಳೆ ಅಲ್ಲಿಯೇ ಬೀಳ್ತಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.  ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆ ಯತ್ನ ನಡೆಯುತ್ತಿದೆ.   ಮೇ 19 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ವೃದ್ಧೆಯ ಸರವನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular