alex Certify BIG NEWS: ಭಾರಿ ಮಳೆಗೆ ಕುಸಿದುಬಿದ್ದ ಕಟ್ಟಡ: 7 ಜನರು ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರಿ ಮಳೆಗೆ ಕುಸಿದುಬಿದ್ದ ಕಟ್ಟಡ: 7 ಜನರು ದುರ್ಮರಣ

ಗಾಂಧಿನಗರ: ಮಳೆ ಅಬ್ಬರಕ್ಕೆ ಬಹುಮಹಡಿ ಕಟ್ಟಡ ಕುಸಿತಗೊಂಡ ಪರಿಣಾಮ 7 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಭಾರಿ ಮಳೆಯಿಂದ ಕಟ್ಟಡ ಕುಸಿತಗೊಂಡಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಪ್ರಸ್ತುತ 15 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಕುಸಿದುಬಿದ್ದ ಕಟ್ಟಡದಲ್ಲಿ ಐದು ಕುಟುಂಬಗಳು ವಾಸವಾಗಿದ್ದವು ಎಂದು ತಿಳಿದುಬಂದಿದೆ. 8 ವರ್ಷಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ನಿರಂತರವಾಗಿ ಸುರಿದ ಮಳೆಗೆ ಕಟ್ಟಡ ಕುಸಿದುಬಿದ್ದು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...