ಅನಿರುದ್ ಜಾತ್ಕರ್ ಅಭಿನಯದ ‘ಚೆಫ್ ಚಿದಂಬರ’ ಚಿತ್ರದ ‘HELLO HELLO’ ಎಂಬ ವಿಡಿಯೋ ಹಾಡೊಂದನ್ನು youtube ನಲ್ಲಿ ಬಿಡುಗಡೆ ಮಾಡಲಾಗಿದೆ. ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧ್ವನಿಯಾಗಿದ್ದು, ವಿನಯ್ ಪಾಂಡವಪುರ ಸಾಹಿತ್ಯವಿದೆ. ಇನ್ನುಳಿದಂತೆ ರಿತ್ವಿಕ್ ಮುರಳಿಧರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಎಂ. ಆನಂದ್ ರಾಜ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅನಿರುದ್ ಗೆ ಜೋಡಿಯಾಗಿ ರಾಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ಅಭಿನಯಿಸಿದ್ದು, ಶರತ್ ಲೋಹಿತಾಶ್ವ, ಶಿವಮಣಿ, ಕೆ.ಎಸ್.ಶ್ರೀಧರ್ ಹಾಗೂ ತುಳಸಿ ಉಳಿದ ಪಾತ್ರವರ್ಗದಲ್ಲಿದ್ದಾರೆ. ಧಮ್ಕಿ ಪಿಚರ್ಸ್ ಬ್ಯಾನರ್ ನಲ್ಲಿ ರೂಪ ಡಿಎನ್ ನಿರ್ಮಾಣ ಮಾಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ಉದಯ್ ಲೀಲಾ ಛಾಯಾಗ್ರಹಣವಿದೆ.