alex Certify ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗಿಂತಲೂ ಈ ವಾಹನಗಳಿಗಿದೆ ಡಿಮ್ಯಾಂಡ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗಿಂತಲೂ ಈ ವಾಹನಗಳಿಗಿದೆ ಡಿಮ್ಯಾಂಡ್‌…..!

ಭಾರತದ ಆಟೋಮೊಬೈಲ್ ಕ್ಷೇತ್ರದ ಟ್ರೆಂಡ್‌ಗಳಲ್ಲಿ ಕೆಲವು ದೊಡ್ಡ ಬದಲಾವಣೆಗಳಾಗುತ್ತಿವೆ. ಬಹುತೇಕ ಗ್ರಾಹಕರು ಹೈಬ್ರಿಡ್ ಕಾರುಗಳ ಮೇಲೆ ಅವಲಂಬಿತರಾಗಿದ್ದಾರೆ. ಅವುಗಳ ಬೆಲೆ ಎಲೆಕ್ಟ್ರಿಕ್ ವಾಹನಗಳಿಗಿಂತ ಎರಡು ಪಟ್ಟು ಹೆಚ್ಚು. ಹಾಗಿದ್ದಲ್ಲಿ ಗ್ರಾಹಕರು ಹೈಬ್ರಿಡ್‌ ಕಾರುಗಳನ್ನು ಇಷ್ಟಪಡುವುದೇಕೆ ಎಂಬುದು ಬಹಳ ಇಂಟ್ರೆಸ್ಟಿಂಗ್‌ ಸಂಗತಿ.

ಏಪ್ರಿಲ್-ಜೂನ್ ನಡುವೆ ಹೈಬ್ರಿಡ್ ವಾಹನಗಳು ಇವಿಗಳ ಮಾರಾಟವನ್ನು ಹಿಂದಿಕ್ಕಿವೆ. ಅಂಕಿ ಅಂಶಗಳ ಏಪ್ರಿಲ್ ಮತ್ತು ಜೂನ್ 11ರ ನಡುವೆ ದೇಶದಲ್ಲಿ 15,000 ಇವಿಗಳು ಮಾರಾಟವಾಗಿದ್ದರೆ, ಹೈಬ್ರಿಡ್ ಮಾರಾಟವು 59,814ರಷ್ಟಿದೆ. ಶುದ್ಧ ಎಲೆಕ್ಟ್ರಿಕ್ ಕಾರುಗಳ ಬೆಲೆ 8 ಲಕ್ಷದಿಂದ ಪ್ರಾರಂಭ. ಆದರೆ ಹೈಬ್ರಿಡ್ ಕಾರುಗಳ ಬೆಲೆ 17 ಲಕ್ಷದಿಂದ ಪ್ರಾರಂಭವಾಗುತ್ತದೆ.

ಫೆಬ್ರವರಿಯಲ್ಲಿ ಇವಿ ಮಾರಾಟಕ್ಕಿಂತ ಐದು ಪಟ್ಟು ವೇಗವಾಗಿ ಅಮೆರಿಕದಲ್ಲಿ ಹೈಬ್ರಿಡ್ ಮಾರಾಟವು ಹೆಚ್ಚಾಯ್ತು. ಇದಕ್ಕೆ ಕಾರಣ ಹೈಬ್ರಿಡ್ ಕಾರುಗಳು ಉತ್ತಮ ಮೈಲೇಜ್ ನೀಡುತ್ತವೆ. ಪ್ರತಿ ಲೀಟರ್‌ಗೆ 25-30 ಕಿಮೀ ಮೈಲೇಜ್ ಬರುತ್ತದೆ. ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆ ಇವಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಹೈಬ್ರಿಡ್ ಕಾರುಗಳು ಇಂಧನ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸಬಹುದು. EVಯಲ್ಲಿ ಕಾರು ಇಷ್ಟೇ ದೂರ ಚಲಿಸಬಲ್ಲದು ಎಂಬ ಮಿತಿಯಿದೆ. ಮತ್ತೆ ಮತ್ತೆ ಅದನ್ನು ಚಾರ್ಜ್‌ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಹೈಬ್ರಿಡ್ ಕಾರುಗಳಲ್ಲಿ ಈ ಸಮಸ್ಯೆ ಇಲ್ಲ, ಬ್ಯಾಟರಿ ಚಾರ್ಜ್ ಆಗದಿದ್ದಲ್ಲಿ, ಅದನ್ನು ಪೆಟ್ರೋಲ್‌ನಲ್ಲಿ ಚಲಾಯಿಸಬಹುದು. ವಾಸ್ತವವಾಗಿ ಹೈಬ್ರಿಡ್ ವಾಹನಗಳು ಇಂಧನ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತವೆ.

ಹೈಬ್ರಿಡ್ ಕಾರುಗಳು ಎರಡು ರೀತಿಯ ಎಂಜಿನ್‌ಗಳಲ್ಲಿ ಚಲಿಸಬಲ್ಲವು.

ಎಲೆಕ್ಟ್ರಿಕ್ ಮೋಟಾರ್: ಇದು ಮೋಟಾರು ಬ್ಯಾಟರಿಯಲ್ಲಿ ಸಂಗ್ರಹವಾಗಿರುವ ವಿದ್ಯುತ್‌ನಿಂದ ಚಲಿಸುತ್ತದೆ.

ಆಂತರಿಕ ದಹನಕಾರಿ ಎಂಜಿನ್ (ICE): ಈ ಎಂಜಿನ್ ಪೆಟ್ರೋಲ್ ಅಥವಾ ಡೀಸೆಲ್‌ನಲ್ಲಿ ಚಲಿಸುತ್ತದೆ.

ಹೈಬ್ರಿಡ್ ಕಾರುಗಳು ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ:

ಎಲೆಕ್ಟ್ರಿಕ್ ಮೋಡ್: ಕಡಿಮೆ ವೇಗದಲ್ಲಿ ಚಾಲನೆ ಮಾಡುವಾಗ ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ, ಹೈಬ್ರಿಡ್ ಕಾರು ಎಲೆಕ್ಟ್ರಿಕ್ ಮೋಡ್‌ನಲ್ಲಿ ಚಲಿಸುತ್ತದೆ. ಇದು ಇಂಧನವನ್ನು ಉಳಿಸುತ್ತದೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ಹೈಬ್ರಿಡ್ ಮೋಡ್: ಹೆಚ್ಚಿನ ಶಕ್ತಿಯ ಅಗತ್ಯವಿರುವಾಗ, ಉದಾಹರಣೆಗೆ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಅಥವಾ ಏರು ಹತ್ತುವ ಸಂದರ್ಭದಲ್ಲಿ ICE ಎಂಜಿನ್ ಸಹ ಕಿಕ್ ಇನ್ ಆಗುತ್ತದೆ. ಇದು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಕೆಲಸ ಮಾಡುತ್ತದೆ.

ಹೈಬ್ರಿಡ್‌ ಕಾರುಗಳಲ್ಲಿ ಇಂಧನ ಉಳಿತಾಯ ಮಾಡಬಹುದು. ಸಾಂಪ್ರದಾಯಿಕ ಕಾರುಗಳಿಗೆ ಹೋಲಿಸಿದರೆ ಹೈಬ್ರಿಡ್ ಕಾರುಗಳು 30 ಪ್ರತಿಶತದಷ್ಟು ಇಂಧನವನ್ನು ಉಳಿಸುತ್ತವೆ.

ಅಷ್ಟೇ ಅಲ್ಲ ಹೈಬ್ರಿಡ್ ಕಾರುಗಳು ಕಡಿಮೆ CO2 ಅನ್ನು ಹೊರಸೂಸುತ್ತವೆ, ಇದು ಪರಿಸರಕ್ಕೆ ಉತ್ತಮವಾಗಿದೆ. ಕೆಲವು ದೇಶಗಳಲ್ಲಿ, ಹೈಬ್ರಿಡ್ ಕಾರುಗಳ ಮೇಲೆ ತೆರಿಗೆ ಪ್ರಯೋಜನಗಳೂ ದೊರೆಯುತ್ತವೆ. ಅಷ್ಟೇ ಅಲ್ಲ ಎಲೆಕ್ಟ್ರಿಕ್ ಮೋಟಾರುಗಳು ತುಂಬಾ ಶಾಂತವಾಗಿರುತ್ತವೆ. ಹೈಬ್ರಿಡ್ ಕಾರುಗಳು ಸಾಂಪ್ರದಾಯಿಕ ಕಾರುಗಳಿಗಿಂತ ಕಡಿಮೆ ಶಬ್ದವನ್ನು ಮಾಡುತ್ತವೆ.

ಆದಾಗ್ಯೂ ಹೈಬ್ರಿಡ್ ಕಾರುಗಳು ಕೆಲವು ಅನಾನುಕೂಲಗಳನ್ನು ಹೊಂದಿವೆ. ಹೈಬ್ರಿಡ್ ಕಾರುಗಳು ಸಾಂಪ್ರದಾಯಿಕ ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇವು ಸಂಕೀರ್ಣ ತಂತ್ರಜ್ಞಾನವನ್ನು ಹೊಂದಿದ್ದು, ರಿಪೇರಿ ಮತ್ತು ನಿರ್ವಹಣೆ ಹೆಚ್ಚು ದುಬಾರಿಯಾಗಬಹುದು. ಹೈಬ್ರಿಡ್ ಕಾರುಗಳು ಎಲೆಕ್ಟ್ರಿಕ್ ಮೋಡ್‌ನಲ್ಲಿ ಕೆಲವು ಕಿಲೋಮೀಟರ್‌ಗಳಷ್ಟು ಮಾತ್ರ ಓಡಬಲ್ಲವು. ನಂತರ ICE ಎಂಜಿನ್ನಿಂದ ಚಾರ್ಜ್ ಮಾಡಬೇಕಾಗುತ್ತದೆ.

ಒಟ್ಟಾರೆಯಾಗಿ ಹೈಬ್ರಿಡ್ ಕಾರುಗಳು ಇಂಧನ ಮತ್ತು ಹಣ ಉಳಿತಾಯ ಮಾಡಲು ಉತ್ತಮ. ಇವುಗಳ ಬಳಕೆಯಿಂದ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಹಾಗಾಗಿಯೇ ಹೈಬ್ರಿಡ್‌ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...