‘ಲೈಂಗಿಕತೆ’ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಇರ್ಫಾನ್ ಪಠಾಣ್ ಮಾಜಿ ಲವರ್ 30-06-2024 3:45PM IST / No Comments / Posted In: Featured News, Live News, Entertainment ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಪಾಯಲ್ ಘೋಷ್ ಹೇಳಿಕೆ ಇದೀಗ ಸಾರ್ವಜನಿಕ ವಲಯದಲ್ಲಿ ಕಿಚ್ಚು ಹಚ್ಚಿದೆ. ಲೈಂಗಿಕತೆಯನ್ನ ಪೂಜಿಸಬೇಕೆಂದಿರುವ ಆಕೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ರಾಜಕೀಯ ಸೇರಿದಂತೆ ಸಿನಿಮಾಗಳಲ್ಲಿ ಕಾಣಿಸಿಕೊಂಡ ಪಾಯಲ್ ಘೋಷ್ ಹೆಚ್ಚು ಜನಪ್ರಿಯತೆ ಗಳಿಸಲಿಲ್ಲ. ಆದರೆ ಆಕೆಯ ಹೇಳಿಕೆಗಳು ಮಾತ್ರ ಆಕೆಯ ಸಿನಿಮಾಗಳಿಗಿಂತ ಹೆಚ್ಚು ಸೆನ್ಸೇಷನ್ ಸೃಷ್ಟಿಸುತ್ತಲೇ ಇವೆ. 34ರ ಹರೆಯದ ಪಾಯಲ್ ಘೋಷ್ ಲೈಂಗಿಕತೆಯು ಪೂಜಿಸಬೇಕಾದ ವಿಷಯವಾಗಿದೆ, ನಾಯಿಗಳು ಮತ್ತು ಬೆಕ್ಕುಗಳ ಲೈಂಗಿಕತೆಯಂತೆ ಮನುಷ್ಯರ ಲೈಂಗಿಕತೆಯನ್ನು ಬಳಸಬಾರದು ಎಂದು ತಾನು ನಂಬುತ್ತೇನೆ ಎಂದು ಪಾಯಲ್ ಘೋಷ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇರ್ಫಾನ್ ಪಠಾಣ್ ಜೊತೆಗಿನ ಒಡನಾಟದ ನಂತರ ಈ ಒಂಬತ್ತು ವರ್ಷಗಳಲ್ಲಿ ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ ಎಂದ ಪಾಯಲ್ ಲೈಂಗಿಕತೆಯ ಬಗ್ಗೆ ತಮ್ಮ ಆಲೋಚನೆಗಳನ್ನು ಹೊರಹಾಕಿದ್ದಾರೆ. ತಾವು ಹೇಳಿದ ಇರ್ಫಾನ್ ಪಠಾಣ್ ಕ್ರಿಕೆಟಿಗನೇ ಅಥವಾ ಅಲ್ಲವೇ ಎಂಬುದನ್ನು ಅವರು ಉಲ್ಲೇಖಿಸದಿದ್ದರೂ, ನೆಟಿಜನ್‌ಗಳು ಅವರು ಕ್ರಿಕೆಟಿಗ ಇರ್ಫಾನ್ ಪಠಾಣ್ ಎಂದೇ ಭಾವಿಸಿದ್ದಾರೆ. 2016ರಲ್ಲಾದ ಬ್ರೇಕಪ್ ಬಗ್ಗೆ ಹೇಳಿಕೊಂಡಿರುವ ಆಕೆ, ಇರ್ಫಾನ್ ಪಠಾಣ್ ಮನೆಯಲ್ಲಿ ಅವರ ಕುಟುಂಬದ ಜೊತೆ 2016ರಲ್ಲಿ ಸಂಭ್ರಮಾಚಾರಣೆಯನ್ನು ಮಾಡಿ ಮನೆಗೆ ಮರಳಿದಾಗ ಫೋನ್ ಮಾಡಿದ ಇರ್ಫಾನ್ ಪಠಾಣ್ ನನ್ನ ಮನೆಯವರು ನಿನ್ನನ್ನು ಒಪ್ಪುವುದಿಲ್ಲ ಎಂದು ಹೇಳಿ ನನ್ನಿಂದ ಅಂತರ ಕಾಪಾಡಿಕೊಂಡರು. ಕೆಲ ದಿನದ ನಂತರ ಅವರ ಸಹೋದರಿ ಕರೆ ಮಾಡಿ ನನ್ನ ಅಣ್ಣ ಮದುವೆಯಾಗುತ್ತಿದ್ದಾನೆ ಎಂದು ಹೇಳಿದರು ಎಂದಿದ್ದಾರೆ. ನನ್ನ ದುಃಖ ಯಾರಿಗೂ ಅರ್ಥವಾಗಲು ಸಾಧ್ಯ ಇಲ್ಲ ಎಂದು ಬರೆದಿದ್ದಾರೆ. ಅಲ್ಲದೆ ನನ್ನ ತಂದೆಯನ್ನು ಕೂಡ ಇರ್ಫಾನ್ ಪಠಾಣ್ ಗೋಸ್ಕರ ನಾನು ಎದುರು ಹಾಕಿಕೊಂಡಿದ್ದೆ ಎಂದಿದ್ದಾರೆ. ಇರ್ಫಾನ್ ಪಠಾಣ್‌ಗಿಂತ ತನಗೆ ಉತ್ತಮ ಆಯ್ಕೆಗಳಿದ್ದವು ಎಂದಿರುವ ನಟಿ, ಸಂಬಂಧದಲ್ಲಿ ನಾನು ಅವನಿಗೆ ಮೋಸ ಮಾಡಲಿಲ್ಲ. ಇರ್ಫಾನ್ ಪಠಾಣ್ ಅವರನ್ನು ಬೆಂಬಲಿಸಿದ್ದೇನೆ ಎಂದು ಹೇಳುವ ಮೂಲಕ ತನಗೆ ಸಿಕ್ಕಿದ್ದನ್ನು ಪಡೆದುಕೊಂಡಿರುವುದಾಗಿ ನಟಿ ಪಾಯಲ್ ಘೋಷ್ ಹೇಳಿದ್ದಾರೆ ನಟಿ ಇಂತಹ ಕಾಮೆಂಟ್ ಮಾಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇರ್ಫಾನ್ ಪಠಾಣ್ ಮತ್ತು ನಾನು ಐದು ವರ್ಷಗಳಿಂದ ಸಂಬಂಧದಲ್ಲಿದ್ದೆವೆಂದು ಆರೋಪಿಸಿದ್ದರು. ಗೌತಮ್ ಗಂಭೀರ್ ಮತ್ತು ಅಕ್ಷಯ್ ಕುಮಾರ್ ಹೆಸರನ್ನೂ ಪ್ರಸ್ತಾಪಿಸಿದ್ದಳು. ಇಷ್ಟೇ ಅಲ್ಲದೇ ಅನುರಾಗ್ ಕಶ್ಯಪ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಇದ್ದಕ್ಕಿದ್ದಂತೆ ಪಾಯಲ್ ಘೋಷ್ ಹಿಂದಿನ ಘಟನೆಗಳನ್ನು ಸ್ಮರಿಸಿ ಈ ರೀತಿ ಪೋಸ್ಟ್ ಹಾಕಿರುವುದೇಕೆ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.