ಹಾಲ್ ಟಿಕೆಟ್ ಕುರಿ ತಿಂದಿದಕ್ಕೆ ಬಾವಿಗೆ ಜಿಗಿದ 9 ನೇ ತರಗತಿ ಬಾಲಕಿ..ಮುಂದಾಗಿದ್ದೇನು..?

ಬೀದರ್ : ಹಾಲ್ ಟಿಕೆಟ್ ಕುರಿ ತಿಂದಿತೆಂದು ಮನನೊಂದು 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪೂಜಾ ಮಾರುತಿ ಮೇತ್ರೆ (14) ಪ್ರವೇಶ ಪತ್ರವನ್ನು ಕುರಿ ತಿಂದು ಹಾಕಿದೆ. ಈ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿ ‘ ಸರ್ ನನಗೆ ಶಾಲೆಗೆ ಬರಲು ಆಗಲ್ಲ, ನಾನು ಸತ್ತು ಹೋಗುತ್ತಿದ್ದೇನೆ, ಕ್ಷಮಿಸಿ ಎಂದು ಹೆಡ್ ಮಾಸ್ಟರ್ ಹೆಸರಿನಲ್ಲಿ ಪತ್ರ ಬರೆದು ಬಾವಿಗೆ ಜಿಗಿದಿದ್ದಾಳೆ.

ಅದೃಷ್ಟವಶಾತ್ ಆ ಬಾವಿಯಲ್ಲಿ ಹೆಚ್ಚು ನೀರು ಇಲ್ಲದ ಕಾರಣ ಆಕೆಗೆ ಏನೂ ಆಗಿರಲಿಲ್ಲ. ಬಾಲಕಿ ಅಳುತ್ತಾ ಬಾವಿಯಲ್ಲಿ ಕುಳಿತಿರುತ್ತಾಳೆ. ನಂತರ ಪೋಷಕರು-ಸ್ಥಳೀಯರು ಹುಡುಕಾಟ ನಡೆಸಿದಾಗ ಬಾಲಕಿ ಬಾವಿಯಲ್ಲಿ ಪತ್ತೆಯಾಗಿದ್ದಾಳೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಬಾಲಕಿ ಪಾರಾಗಿದ್ದಾಳೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read