ಮೈತುಂಬಾ ಚಿನ್ನಾಭರಣ ಧರಿಸಿದ 90 ರ ವೃದ್ಧ; ಮದುವೆ ಪ್ರಸ್ತಾಪ ಇಡ್ತಿದ್ದಾರೆ ಚೀನಾ ಮಹಿಳೆಯರು…..!

Indians Bought 140.3 Tonnes Of Jewellery In Q2'22; 43% Up Vis-à-Vis Q1'22 | India.comಭಾರತದಲ್ಲಿ, ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುವುದನ್ನು ನೀವು ಹೆಚ್ಚಾಗಿ ನೋಡಬಹುದು. ನವ ವಿವಾಹಿತರಿಂದ ಹಿಡಿದು ವೃದ್ಧರವರೆಗೂ ಚಿನ್ನದ ಆಭರಣಗಳು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ.

ಮಹಿಳೆಯರು ಮಾತ್ರವಲ್ಲದೆ ಶ್ರೀಮಂತ ಕುಟುಂಬದ ಕೆಲವು ಪುರುಷರು ಕೂಡ ಹೆಮ್ಮೆಯ ಸಂಕೇತವಾಗಿ ಆಭರಣಗಳನ್ನು ಧರಿಸುತ್ತಾರೆ. ಒಂದು ಉದಾಹರಣೆಯೆಂದರೆ ದಿವಂಗತ ಸಂಗೀತ ಸಂಯೋಜಕ ಬಪ್ಪಿ ಲಹಿರಿ. ಇತ್ತೀಚೆಗೆ, ಚೀನಾದ ವ್ಯಕ್ತಿಯೊಬ್ಬ 800,000 ಯುವಾನ್ ಅಥವಾ 94 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಪ್ರದರ್ಶಿಸಿದ್ದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.

ವಿಚಿತ್ರವೆಂದರೆ, ಈ ಚಿನ್ನವನ್ನು ನೋಡಿ ಬೆರಗಾಗಿರುವ ಚೀನಾ ಮಹಿಳೆಯರು 90 ವರ್ಷದ ವ್ಯಕ್ತಿಗೆ ಮದುವೆ ಪ್ರಸ್ತಾಪ ಇರಿಸಿದ್ದಾರೆ ! ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, 90 ವರ್ಷ ವಯಸ್ಸಿನ ಈತ ಚಿನ್ನದ ಆಭರಣಗಳನ್ನು ಧರಿಸಿ, ವಿಡಿಯೋ ಹರಿಬಿಟ್ಟಿದ್ದಾನೆ.

ಆಗ್ನೇಯ ಚೀನಾದ ಫುಜಿಯಾನ್ ಪ್ರಾಂತ್ಯದ, ಹೆಚ್ಚು ನಿರ್ದಿಷ್ಟವಾಗಿ ಜಾಂಗ್‌ಝೌನಲ್ಲಿನ ಅಂಗಡಿಯೊಂದರಲ್ಲಿ ವ್ಯಕ್ತಿ ತನ್ನ ಆಭರಣಗಳನ್ನು ತೋರಿಸುತ್ತಿರುವುದು ಕಂಡುಬಂದಿದೆ. ಒಂದು ಚಿನ್ನದ ಬಳೆ, ಎಡಗೈಯಲ್ಲಿ ಚಿನ್ನದ ಉಂಗುರ ಸೇರಿದಂತೆ ಹಲವಾರು ಆಭರಣ ಈತನ ಮೈಮೇಲೆ ಇದೆ. ಬಳೆಯೊಂದೇ ಸುಮಾರು 2 ಕೆಜಿ ತೂಕವಿದೆ ಎಂದು ಆತ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read