ಬೆಂಗಳೂರು : ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‍ವೈ) ಯಡಿಯಲ್ಲಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆ. ಪ್ರದೇಶದವರೆಗೆ ಶೇ.90ರ ಸಹಾಯಧನ ಮತ್ತು ಇತರೆ ರೈತರಿಗೆ ಶೆ.75ರ ಸಹಾಯಧನ ನೀಡಲಾಗುವುದು. ಹಾಗೂ 2 ಹೆ. ರಿಂದ 5ಹೆ. ಪ್ರದೇಶದವರೆಗೆ ಶೇ. 45 ರ ಸಹಾಯಧನ ನೀಡಲಾಗುವುದು.
ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಗದಗ, ಹಾಸನ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿಯ ಅನುಷ್ಠಾನಕ್ಕೆ ತೀರ್ಮಾನಿಸಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಬಿಹಾರಿ ಯೋಜನೆ ಅಡಿ ತುಂತುರು ಮತ್ತು ಹನಿ ನೀರಾವರಿ ಕೃಷಿ ಘಟಕಗಳನ್ನು ಕೃಷಿ ಬೆಳೆಗಳಿಗೆ ನೀಡಲು ಆದೇಶಿಸಲಾಗಿದೆ. ಎಲ್ಲಾ ವರ್ಗದ ರೈತರಿಗೆ ಎರಡು ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಣ್ಣ, ಅತಿ ಸಣ್ಣ ರೈತರಿಗೆ ಶೇಕಡ 90ರಷ್ಟು ಇತರೆ ವರ್ಗದ ರೈತರಿಗೆ ಶೇಕಡ 45ರಷ್ಟು ಸಹಾಯಧನ ಸಿಗಲಿದೆ.
ತುಂತುರು ನೀರಾವರಿ ಘಟಕದ (ಸ್ಪಿಂಕ್ಲರ್ ಸೆಟ್)ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ಅರ್ಜಿ ನಮೂನೆ.
ಆಧಾರ್ ಕಾರ್ಡ.
ಬ್ಯಾಂಕ್ ಪಾಸ್ ಬುಕ್.
2 ಫೋಟೋ
ಜಾತಿ ಪ್ರಮಾಣ ಪತ್ರ ( ಪ.ಜಾ/ ಪ ಪಂ ದವರಿಗೆ ಮಾತ್ರ)
ಪಹಣಿ
ನೀರಿನ ಹಕ್ಕಿನ ಪತ್ರ
ಬೆಳೆ ದೃಡಿಕರಣ ಪತ್ರ (ಖುಷ್ಕ ಜಮೀನು ಮಾತ್ರ)
20 ರೂ ಛಾಪ ಕಾಗದ ನೋಟರಿ ಕನ್ನಡ ಮಾತ್ರ (ಚೇಕ್ಕು ಬಂದಿ ಹಾಕಿಸುವುದು)