ಬೆಂಗಳೂರಿನಲ್ಲಿ ಬೆಡ್ ಶೀಟ್ ಗ್ಯಾಂಗ್’ನ 8 ಮಂದಿ ಆರೋಪಿಗಳು ಅರೆಸ್ಟ್.! ಯಾರಿವರು.?

ಬೆಂಗಳೂರು : ನಗರಗಳ ದೊಡ್ಡ ದೊಡ್ಡ ಶೋ ರೂಂಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಖತರ್ ನಾಕ್ ಬೆಡ್ ಶೀಟ್ ಗ್ಯಾಂಗ್ ಒಂದನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ನಗರಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಖದೀಮರು ಬಿಹಾರ, ಉತ್ತರ, ಕಾರವಾರ, ಬೆಂಗಳೂರು ಸೇರಿದಂತೆ ಹಲವು ಕಡೆ ಕೃತ್ಯ ಎಸಗಿದ್ದರು. ಕೊಲಿ ಕೆಲಸಕ್ಕೆ ಬರುವ ನೆಪದಲ್ಲಿ ಗ್ಯಾಂಗ್ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿತ್ತು.ಇತ್ತೀಚೆಗೆ ಬೈಯಪ್ಪನಹಳ್ಳಿಯ ನಾಗವಾರ ಪಾಳ್ಯದಲ್ಲಿ ಸ್ಯಾಮ್ ಸಂಗ್ ಶೋರೂಂಗೆ ನುಗ್ಗಿದ ಗ್ಯಾಂಗ್ ಸುಮಾರು 22 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ ಮಾಡಿತ್ತು. ಗುರುತು ಸಿಗಬಾರದು ಎಂದು ಬೆಡ್ ಶೀಟ್ ಹೊತ್ತುಕೊಂಡು ಬರುವ ಗ್ಯಾಂಗ್ ಕಳ್ಳತನ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿತ್ತು.ಬೆಡ್ ಶೀಟ್ ಗ್ಯಾಂಗ್’ನ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬೆಡ್ ಶೀಟ್ ಗ್ಯಾಂಗ್’ ಒಂದು ಗ್ಯಾಸ್ ಕಟರ್ ಬಳಸಿ ಎಟಿಎಂ ನಲ್ಲಿ ಹಣ ದರೋಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು. ಒಂದೇ ದಿನ ಬೆಳ್ಳಂದೂರು, ಹೊಸೂರಿನ ಎಟಿಎಂ ನಲ್ಲಿ ಈ ಘಟನೆ ನಡೆದಿದೆ. ಬೆಡ್ ಶೀಟ್ ಸುತ್ತಿಕೊಂಡು ಬಂದ ಗ್ಯಾಂಗ್ ಎಟಿಎಮ್ ನ ಸಿಸಿ ಕ್ಯಾಮೆರಾಗೆ ಬ್ಲಾಕ್ ಸ್ಪ್ರೇ ಹೊಡೆದು 16,56,800 ರೂ ಹಣ ದರೋಡೆ ಮಾಡಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read