8 ಕೆಚ್ಚಲನ್ನು ಹೊಂದಿದೆ ಈ ಕರು; ವಿಚಿತ್ರ ನೋಡಲು ಮುಗಿಬಿದ್ದ ಜನ

ರಾಜಸ್ಥಾನ: ಐದು, ಆರು ಕಾಲು, ಎರಡಕ್ಕಿಂತ ಹೆಚ್ಚು ಕಣ್ಣು ಮೂಗು ಇರುವಂತಹ ಕರುಗಳಿಗರ ಹಸು ಜನ್ಮ ನೀಡಿರೋದನ್ನ ಬೇರೆ ಬೇರೆ ಕಡೆ ಕೇಳಿದ್ದೇವೆ. ನೋಡಿದ್ದೇವೆ. ಇಂಥಹ ಅದೆಷ್ಟೋ ವಿಚಿತ್ರ ಘಟನೆಗಳು ಭೂಮಿ ಮೇಲೆ ನಡೆದಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಎಂಟು ಕೆಚ್ಚಲು ಹೊಂದಿರುವ ಕರು ಒಂದಕ್ಕೆ ಹಸು ಜನ್ಮ ನೀಡಿದೆ.

ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ ಬಹೊರ್‌ನ ಜೆನ್‌ಪುರ್ಬಸ್‌ನಲ್ಲಿ. ಸುನೀಲ್ ಶರ್ಮಾ ಎಂಬುವವರು ಸಾಕಿದ್ದ ಹಸು ಜನವರಿ 10 ರಂದು ಈ ವಿಶೇಷ ಕರುವಿಗೆ ಜನ್ಮ ನೀಡಿದೆ. ಇನ್ನು ಈ ವಿಶೇಷ ಕರುವಿಗೆ ಚೌತ ಮಾತಾ ಎಂದು ದೇವರ ಹೆಸರನ್ನು ಇಡಲಾಗಿದೆ. ಹಸು ಹಾಗೂ ಕರು ಎರಡೂ ಆರೋಗ್ಯವಾಗಿದ್ದಾವಂತೆ. ಇನ್ನು ಈ ಸುದ್ದಿ ಗೊತ್ತಾಗುತ್ತಿದ್ದಂತೆ ಅಕ್ಕ ಪಕ್ಕದ ಗ್ರಾಮದವರು ಬಂದು ಕರುವನ್ನು ನೋಡಿಕೊಂಡು ಹೋಗುತ್ತಿದ್ದಾರಂತೆ.

ಈ ರೀತಿ ವಿಚಿತ್ರವಾಗಿ ಕರುಗಳ ಜನನ ಯಾಕೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಭ್ರೂಣದ ಬೆಳವಣಿಗೆಯಲ್ಲಿನ ಅಸಹಜತೆಯಿಂದಾಗಿ ಈ ರೀತಿಯಾಗಿ ವಿಚಿತ್ರ ಕರುಗಳು ಹುಟ್ಟುತ್ತವೆ ಅಂತಿದ್ದಾರೆ ವೈದ್ಯ ಪಶು ವೈದ್ಯರಾದ ಡಾ.ಸವಿತಾ ಗೋಸ್ವಾಮಿ. ಇನ್ನು ಇದನ್ನು ದೇವರ ಸೃಷ್ಟಿ ಅಂತಲೂ ಕರೆಯುತ್ತಾರೆ ಅನೇಕರು. ಅದೇನೆ ಇರಲಿ ಇಂಥಹದೊಂದು ವಿಚಿತ್ರ ಕರುಗಳ ಜನನ ಹಿಂದೆಯೂ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read