77 ವರ್ಷದ ಹಿಂದಿನ ಫೋಟೋ ಹಂಚಿಕೊಂಡ ರತನ್ ಟಾಟಾ; ಅವು ಸಂತೋಷದ ದಿನಗಳೆಂದ ಖ್ಯಾತ ಉದ್ಯಮಿ

ಟಾಟಾ ಸನ್ಸ್ ನ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಬಾಲ್ಯದ ಅತ್ಯಮೂಲ್ಯ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ತಮ್ಮ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಅವರೊಂದಿಗೆ ಕಪ್ಪು-ಬಿಳುಪು ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದೊಂದಿಗೆ ಅವರು ಹೃದಯಸ್ಪರ್ಶಿ ಶೀರ್ಷಿಕೆಯನ್ನು ಸಹ ಬರೆದಿದ್ದು ಪೋಸ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಅವು ಸಂತೋಷದ ದಿನಗಳು. ನಮ್ಮ ನಡುವೆ ಏನೂ ಬರಲಿಲ್ಲ. (1945 ನನ್ನ ಸಹೋದರ ಜಿಮ್ಮಿಯೊಂದಿಗೆ) ಎಂದು ರತನ್ ಟಾಟಾ ಅವರು ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.

ಕಪ್ಪು-ಬಿಳುಪು ಬಣ್ಣದ ಫೋಟೋದಲ್ಲಿ, ಸಹೋದರರಿಬ್ಬರೂ ತಮ್ಮ ಮುದ್ದಿನ ನಾಯಿಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಕ್ಯಾಮರಾವನ್ನು ನೋಡಿ ನಗುತ್ತಿದ್ದಾರೆ. ವಾಸ್ತವವಾಗಿ 85 ವರ್ಷ ವಯಸ್ಸಿನ ರತನ್ ಟಾಟಾ ಅವರು ಶ್ವಾನಪ್ರಿಯರೂ ಹೌದು. ರತನ್ ಟಾಟಾ ಅವರ ಪೋಸ್ಟ್ ಗೆ ಪಲಾಶ್ ಸೇನ್, ಸಿಕಂದರ್ ಖೇರ್ ಮತ್ತು ಬಾದ್‌ಶಾ ಅವರಂತಹ ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read