ಇದೊಂದು ಸ್ಫೂರ್ತಿದಾಯಕ ನಡೆ. ವಯಸ್ಸಾಯ್ತು ಎಂದು ಮನೆಯಲ್ಲಿ ಕೂರಲು ಬಯಸದ 74 ವರ್ಷದ ವೃದ್ಧರೊಬ್ಬರು ಇಳಿವಯಸ್ಸಿನಲ್ಲೂ ದುಡಿಯುವ ಛಲ ಹೊಂದಿದ್ದಾರೆ.
ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಕರವಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ಹಸನ್ ಅಲಿ ಎಂಬ 74 ವರ್ಷದ ವ್ಯಕ್ತಿಯ ಜೀವನೋತ್ಸಾಹ ನಿಮ್ಮನ್ನು ಹುಬ್ಬೇರಿಸುತ್ತದೆ. ಅಫಿಷಿಯಲ್ ಹ್ಯೂಮನ್ಸ್ ಆಫ್ ಬಾಂಬೆ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ವಿಡಿಯೋ ಹೃದಯಸ್ಪರ್ಶಿ ಕಥೆ ಹೇಳುತ್ತದೆ.
ತನ್ನ ಮಕ್ಕಳು ವಿಶ್ರಾಂತಿ ಪಡೆಯಲು ಸಲಹೆ ನೀಡಿದ ಹೊರತಾಗಿಯೂ, ಹಸನ್ ಅಲಿ ಪ್ರತಿದಿನ ಕೆಲಸ ಮಾಡುವುದಕ್ಕೆ ಉತ್ಸುಕರಾಗಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಶೂ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರೂ, ಮಾರಾಟದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿರುವ ಕಾರಣ ಕರವಸ್ತ್ರಗಳನ್ನು ಮಾರಾಟ ಮಾಡುವುದು ಒಂದು ಕಲೆಯಾಗಿದೆ.
ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ ನೋಡಿ ಹಸನ್ ಅಲಿಯವರ ಸಕಾರಾತ್ಮಕ ಮನೋಭಾವವು ನೆಟ್ಟಿಗರಿಗೆ ಸ್ಫೂರ್ತಿ ನೀಡಿದೆ.
https://youtu.be/D3oIuxD1MRA