7 ವರ್ಷದ ಬಾಲಕಿ ಮೇಲೆ ತಂದೆ, ಮಗನಿಂದ ಅತ್ಯಾಚಾರ

 

ಹೈದರಾಬಾದ್: 7 ವರ್ಷದ ಬಾಲಕಿಗೆ ಮೊಬೈಲ್ ಕೊಡಿಸುವಿದಾಗಿ ನಂಬಿಸಿ ಕರೆದೊಯ್ದು ತಂದೆ ಹಾಗೂ ಮಗ ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ನಗರಕ್ಕೆ ವಲಸೆ ಬಂದಿದ್ದ ಕುಟುಂಬವೊಂದು ಪೇಟಬಶಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವರ್ಷಗಳಿಂದ ಈ ಕುಟುಂಬ ಈ ಪ್ರದೇಶದಲ್ಲಿ ವಾಸವಾಗಿತ್ತು. ಸಮೀಪದ ಮನೆಯಲ್ಲಿದ್ದ 45 ವರ್ಷದ ಶಿವಕುಮಾರ್ ಹಾಗೂ ಆತನ ಮಗ 19 ವರ್ಷದ ಶ್ಯಾಮೇಲ್ ಬಾಲಕಿಯನ್ನು ಯಾವಾಗಲೂ ಮಾತನಾಡಿಸುತ್ತಿದ್ದರು. ಪುಟ್ಟ ಬಾಲಕಿ ಶಿವಕುಮಾರ್ ನನ್ನು ತಾತಾ ಎಂದು, ಆತನ ಮಗ ಶ್ಯಾಮೆಲ್ ನನ್ನು ಅಣ್ಣ ಎಂದು ಕರೆಯುತ್ತಿದ್ದಳು.

ಬಾಲಕಿಯ ತಂದೆ-ತಾಯಿ ಮಗಳನ್ನು ಮನೆಯಲ್ಲಿಯೇ ಬಿಟ್ಟು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಬಾಲಕಿ ಒಬ್ಬಳೇ ಮನೆಯಲ್ಲಿರುವುದನ್ನು ಗಮನಿಸಿದ ಶಿವಕುಮಾರ್ ಹಾಗೂ ಆತನ ಮಗ ಶ್ಯಾಮೆಲ್ ಬಾಲಕಿಗೆ ಮೊಬೈಲ್ ಆಸೆ ತೋರಿಸಿ ಮೊಬೈಲ್ ಕೊಡಿಸುವುದಾಗಿ ನಂಬಿಸಿ ಕರೆದೊಯ್ದಿದ್ದಾರೆ. ಪುಟ್ಟ ಬಾಲಕಿ ಮೇಲೆ ಶಿವಕುಮಾರ್ ಅತ್ಯಾಚಾರವೆಸಗಿದ್ದು, ಬಳಿಕ ಆತನ ಮಗನೂ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಾನೆ.

ತಂದೆ-ತಾಯಿ ಮನೆಗೆ ವಾಪಸ್ ಬಂದಾಗ ಬಾಲಕಿ ಹೊಟ್ಟೆನೋವೆಂದು ಒದ್ದಾಡುತ್ತಿದ್ದಳು. ತಕ್ಷಣ ಅವಳನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಬಾಲಕಿ ಮೇಲೆ ಅತ್ಯಾಚಾರವಾಗಿದೆ ಎಂದು ತಿಳಿಸಿದ್ದಾರೆ. ಮಗಳ ಸ್ಥಿತಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ತಂದೆ-ಮಗನನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read