ಆಹಾರ ಪ್ರಿಯರಿಗೆ ಖುಷಿ ಸುದ್ದಿ ! 2025ರ ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳ ಪಟ್ಟಿಯ ವಿಸ್ತೃತ ಲಿಸ್ಟ್ ಬುಧವಾರ ಬಿಡುಗಡೆಯಾಗಿದ್ದು, ಇದರಲ್ಲಿ ನಮ್ಮ ಭಾರತದ 7 ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ. ಮುಂಬೈನಿಂದ ಬೆಂಗಳೂರಿನವರೆಗೆ, ದೆಹಲಿಯಿಂದ ಕಸೌಲಿಯವರೆಗೆ ನಮ್ಮ ರೆಸ್ಟೋರೆಂಟ್‌ಗಳು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿವೆ.
ಮುಂಬೈನ ಅಮೆರಿಕಾನೋ (#71), ದಿ ಟೇಬಲ್ (#88) ಮತ್ತು ದಿ ಬಾಂಬೆ ಕ್ಯಾಂಟೀನ್ (#91) ರೆಸ್ಟೋರೆಂಟ್‌ಗಳು ಈ ಲಿಸ್ಟ್‌ನಲ್ಲಿವೆ. ಇನ್ನು ಬೆಂಗಳೂರಿನ ಫಾರ್ಮ್‌ಲೋರ್ (#68) ರೆಸ್ಟೋರೆಂಟ್‌ಗೆ ಒನ್ ಟು ವಾಚ್ ಅವಾರ್ಡ್ 2025 ಸಿಕ್ಕಿದೆ. ಚೆಫ್ ಜಾನ್ಸನ್ ಎಬೆನೆಜರ್ ಮತ್ತು ಉದ್ಯಮಿ ಕೌಶಿಕ್ ರಾಜು ಸೇರಿ ಶುರುಮಾಡಿದ ಈ ರೆಸ್ಟೋರೆಂಟ್, ಸ್ಥಳೀಯ ಪದಾರ್ಥಗಳನ್ನ ಬಳಸಿ ಊಟ ಮಾಡಿಸೋಕೆ ಫೇಮಸ್.
ಕಸೌಲಿಯ ನಾರ್ (#66) ರೆಸ್ಟೋರೆಂಟ್‌ನಲ್ಲಿ ಚೆಫ್ ಪ್ರತೀಕ್ ಸಾಧು ಹಿಮಾಲಯದ ಕಾಡು ಪದಾರ್ಥಗಳನ್ನ ಬಳಸಿ ಊಟ ಬಡಿಸ್ತಾರೆ. ದೆಹಲಿಯ ಇಂಜಾ (#87) ರೆಸ್ಟೋರೆಂಟ್ ಭಾರತೀಯ ರುಚಿ ಜೊತೆ ಜಪಾನೀಸ್ ಸ್ಟೈಲ್ ಮಿಕ್ಸ್ ಮಾಡಿ ಹೊಸ ರುಚಿ ಕೊಡ್ತಿದೆ. ದೆಹಲಿಯ ದಮ್ ಪುಖ್ತ್ (#89) ರೆಸ್ಟೋರೆಂಟ್ 1988ರಿಂದ ಅವಧಿ ಶೈಲಿಯ ಬಿರಿಯಾನಿ ಮತ್ತು ಕಬಾಬ್‌ಗಳಿಗೆ ಫೇಮಸ್.
ಈ ಲಿಸ್ಟ್‌ನಲ್ಲಿ ನಮ್ಮ ರೆಸ್ಟೋರೆಂಟ್‌ಗಳು ಇರೋದು ನಮಗೆಲ್ಲಾ ಹೆಮ್ಮೆ ತರುವ ವಿಚಾರ. ಹೊಸ ರುಚಿ, ಹೊಸ ಕಥೆಗಳನ್ನ ಹೇಳೋ ಈ ರೆಸ್ಟೋರೆಂಟ್‌ಗಳು ನಮ್ಮ ದೇಶದ ಅಡುಗೆ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸುತ್ತಿವೆ.