Watch Video | ಗೋಲ್ಗಪ್ಪಾಗಾಗಿ ಬೀದಿ ಕಾಳಗ; ವ್ಯಾಪಾರಿ ಜೊತೆ WWE ಶೈಲಿಯಲ್ಲಿ ಫೈಟ್

ಹಮೀರ್‌ಪುರ: ಗ್ರಾಹಕರು ಮತ್ತು ಮಾರಾಟಗಾರರ ನಡುವಿನ ವಾದಗಳು ಭಾರತೀಯ ಬೀದಿಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ಈ ವಾಗ್ವಾದಗಳು ಹಿಂಸಾತ್ಮಕ ರೂಪ ಪಡೆಯುತ್ತವೆ. ಇದೀಗ ಗ್ರಾಹಕ ಹಾಗೂ ಪಾನಿಪುರಿ ಮಾರಾಟಗಾರನ ನಡುವಿನ ಜಗಳದ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದೆ. 10 ರೂ.ಗೆ ಕೇವಲ ಏಳು ಗೋಲ್ಗಪ್ಪವನ್ನು ನೀಡಿದ್ದಕ್ಕೆ ಗ್ರಾಹಕ ಕುಪಿತಗೊಂಡಿದ್ದಾನೆ. ಇದು ಇಬ್ಬರ ನಡುವೆ ಹೊಡೆದಾಟಕ್ಕೆ ಕಾರಣವಾಯ್ತು.

ಕಿಶೋರ್ ಕುಮಾರ್ ಎಂಬ ಗ್ರಾಹಕ ಮಾರಾಟಗಾರ ರಾಮ್ ಸೇವಕನಿಗೆ ಹಲ್ಲೆ ಮಾಡಿದ್ದಾನೆ. ರಸ್ತೆ ಬದಿಯಲ್ಲಿ ಕುಸ್ತಿ ಪಂದ್ಯಾಟದಂತೇ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಅಲ್ಲಿದ್ದ ಕೆಲವರು ದೃಶ್ಯದ ವಿಡಿಯೋ ಚಿತ್ರೀಕರಿಸಿದ್ದಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಲವಾರು ಮಂದಿ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು ಬೀದಿಬದಿ ವ್ಯಾಪಾರಿಗಳು ಗೊಲ್ಗಪ್ಪನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದ್ರೆ, ಇನ್ನೂ ಕೆಲವರು ಘಟನೆಯ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ರು.

ಬೀದಿ ವ್ಯಾಪಾರಿ ಗ್ರಾಹಕರನ್ನು ವಂಚಿಸುತ್ತಿದ್ದರು. ಉತ್ತರ ಪ್ರದೇಶದಲ್ಲಿ ಬೀದಿಯಲ್ಲಿರುವ ಗೋಲ್ಗಪ್ಪಗಳು ಅಷ್ಟು ದುಬಾರಿಯಲ್ಲ, ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ಇಲ್ಲಿ ಬೆಂಗಳೂರಿನಲ್ಲಿ ಆರು ಗೋಲ್ಗಪ್ಪಗಳಿಗೆ 30 ರೂ. ತೆಗೆದುಕೊಳ್ಳುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

ಇನ್ನು ವಿಡಿಯೋ ವೈರಲ್ ಆದ ನಂತರ, ಹಮೀರ್‌ಪುರ ಪೊಲೀಸರು ಘಟನೆಯ ತನಿಖೆಯನ್ನು ತ್ವರಿತವಾಗಿ ಕೈಗೆತ್ತಿಕೊಂಡ್ರು. ಪೊಲೀಸರು ಆಗಮಿಸುವ ಮುನ್ನವೇ ವ್ಯಾಪಾರಿಗೆ ಹಲ್ಲೆ ಮಾಡಿದ ಕಿಶೋರ್ ಕುಮಾರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ, ಪೊಲೀಸರು ಆತನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

https://twitter.com/gharkekalesh/status/1696809286163415178?ref_src=twsrc%5Etfw%7Ctwcamp%5Etweetembed%7Ctwterm%5E1696809286163415178%7Ctwgr%5Eb9b384ead64ecb1c736f07050349214a03ae0f5d%7Ctwcon%5Es1_&ref_url=https%3A%2F%2Fwww.india.com%2Fviral%2Ftrending-7-golgappas-for-rs-10-sparks-wwe-style-street-fight-in-up-viral-video-6276529%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read