ಲಂಬೂ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೀಗೊಂದು ಫನ್ನಿ ಸಾಲು; ಯುವತಿ ಕೊಟ್ಟ ಉಡುಗೊರೆಗೆ ಎಲ್ಲರ ಮೆಚ್ಚುಗೆ

ನಿಜವಾದ ಸ್ನೇಹಿತರೆಂದರೇ ಹಾಗೆಯೇ ! ಒಬ್ಬರನ್ನೊಬ್ಬರ ಕಾಲೆಳೆಯುವುದು, ಛೇಡಿಸುವುದು ಸಾಮಾನ್ಯ. ಹುಟ್ಟುಹಬ್ಬಗಳು ಹಾಗೂ ಮದುವೆಗಳ ಸಂದರ್ಭಗಳಲ್ಲಿ ಉಡುಗೊರೆ ಕೊಡುವಾಗಲೂ ಚೇಷ್ಟೆ ಮಾಡುವುದು ಕ್ಲೋಸ್ ಫ್ರೆಂಡ್‌ಗಳ ಚಾಳಿ.

ಆರಡಿ ಎರಡಿಂಚು ಇರುವ ತನ್ನ ಸ್ನೇಹಿತನಿಗೆ ಫನ್ನಿ ಉಡುಗೊರೆಯೊಂದನ್ನು ಕೊಡುವ ಮೂಲಕ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಹಾಸ್ಯಮಯ ಸಂದೇಶವೊಂದನ್ನು ಹಾಕುವ ಮೂಲಕ ಈ ವಿಶೇಷ ಉಡುಗೊರೆಯನ್ನು ನೀಡಿದ ಯುವತಿ ತನ್ನ ಸ್ನೇಹಿತನಿಗೆ ನೀಡಿದ ಪ್ಲಾಕ್‌ನ ಚಿತ್ರವನ್ನು ವೇದಾಂತ್‌ ಲಂಬಾ ಎಂಬುವವರು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ನಿನ್ನ ಎತ್ತರದಿಂದ ನಮಗೆ ಪದೇ ಪದೇ ಆಗುವ ಕಿರಿಕಿರಿಗಳನ್ನು ಸಹಿಸಿಕೊಳ್ಳುವಂತೆ ಮಾಡಿರುವೆ,” ಎಂಬ ಅರ್ಥದ ಸಂದೇಶವನ್ನು ಪ್ಲಾಕ್‌ನಲ್ಲಿ ಹಾಕಲಾಗಿರುವ ವಿಚಾರವನ್ನು ವೇದಾಂತ್‌ ಈ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

“ನನ್ನ ಪ್ರಾಣ ಸ್ನೇಹಿತೆ ನನಗೊಂದು ಉಡುಗೊರೆ ಕೊಟ್ಟಿದ್ದಾರೆ ಹಾಗೂ ಒಬ್ಬ ಬರಹಗಾರ್ತಿಯಾಗಿ ನನ್ನ ಗೌರವಕ್ಕೆ ಪಾತ್ರರಾಗಿದ್ದಾರೆ,” ಎಂದು ತಮ್ಮ ಸ್ನೇಹಿತೆ ಕೊಟ್ಟ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ ವೇದಾಂತ್‌.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು ವೇದಾಂತ್‌ರ ಸ್ನೇಹಿತೆಗೆ ಅತ್ಯುತ್ತಮ ಹಾಸ್ಯಪ್ರಜ್ಞೆ ಇದ್ದು, ಆಕೆಯನ್ನು ’ಕಾಪಿರೈಟಿಂಗ್ ಕ್ವೀನ್’ ಎಂದು ಕರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read