ʼನಿವೃತ್ತಿʼ ನಂತರ ಭಾರತಕ್ಕೆ ಮರಳಲು ಇಚ್ಛಿಸುತ್ತಾರಂತೆ ಅನಿವಾಸಿ ಭಾರತೀಯರು; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಕಾರಣ ಬಹಿರಂಗ

ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿರುವ 60 ಶೇಕಡಾ ಅನಿವಾಸಿ ಭಾರತೀಯರು ನಿವೃತ್ತಿಯ ನಂತರ ಭಾರತಕ್ಕೆ ಮರಳುವ ಪ್ಲಾನ್ ಮಾಡಿಕೊಂಡಿದ್ದಾರೆ. ಎಸ್‌ಬಿಎನ್‌ಆರ್‌ಐ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಸಮೀಕ್ಷೆಯ ಪ್ರಕಾರ ಶೇಕಡಾ 37 ಕೆನಡಾದ ಅನಿವಾಸಿ ಭಾರತೀಯರು ತಮ್ಮ ನಿವೃತ್ತಿಯ ನಂತರದ ದಿನಗಳನ್ನು ತಮ್ಮ ತಾಯ್ನಾಡಿನಲ್ಲಿ ಕಳೆಯುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇದೇ ರೀತಿಯ ಅಭಿಪ್ರಾಯವನ್ನು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಶೇಕಡಾ 33 ಅನಿವಾಸಿ ಭಾರತೀಯರು ಮತ್ತು ಯು.ಕೆ ಮತ್ತು ಯು.ಎಸ್‌ನಲ್ಲಿರುವ ಶೇಕಡಾ 23ರಷ್ಟು ಜನರು ಹಂಚಿಕೊಂಡಿದ್ದಾರೆ.

ಅನಿವಾಸಿ ಭಾರತೀಯರ ಈ ನಿರ್ಧಾರಕ್ಕೆ ಕಾರಣವೇನು ಎಂದು ನೋಡುವುದಾದರೆ. ಭಾರತದಲ್ಲಿ ಜೀವನ ನಡೆಸಲು ಆಗುವ ಖರ್ಚು ವೆಚ್ಚ, ಇಲ್ಲಿನ ಸಾಂಸ್ಕೃತಿಕ ವೈಭವಗಳು, ತಮ್ಮ ಕುಟುಂಬ ಮತ್ತು ಸೋಷಿಯಲ್ ರಿಲೇಷನ್‌ಶಿಪ್, ಆರೋಗ್ಯ ಸೌಲಭ್ಯಗಳು ಮತ್ತು ಭಾರತದಲ್ಲಿ ಮಾಡಬಹುದಾದ ಹೂಡಿಕೆಯ ಅವಕಾಶಗಳು, ಇವೆಲ್ಲವೂ ಅವರ ದೀರ್ಘಾವಧಿಯ ಹಣಕಾಸಿನ ಹೂಡಿಕೆಯ ಜೊತೆ ಹೊಂದಾಣಿಕೆಯಾಗುತ್ತವೆ.

ಇನ್ನು ಈ ಸಮೀಕ್ಷೆಯಲ್ಲಿ ಭಾರತದಲ್ಲಿ ಲಭಿಸುವ ಹಣಕಾಸು ಸೇವೆಗಳು, ಇಲ್ಲಿನ ತಂತ್ರಜ್ಞಾನದ ಅಭಿವೃದ್ದಿ ಸ್ಟಾರ್ಟಪ್‌ ಯೋಜನೆಗಳಿಗೆ ಉತ್ತಮ ಜಾಗತಿಕ ಕೇಂದ್ರವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಇದರ ಜೊತೆ ಭಾರತವು ತನ್ನ ಆರ್ಥಿಕತೆಯನ್ನು ಸ್ಥಿರವಾಗಿಟ್ಟುಕೊಳ್ಳಲು ಪ್ರಬಲವಾದ ಕಾರ್ಯತಂತ್ರವನ್ನು ರೂಪಿಸುತ್ತಿದೆ ಎಂದು ತಿಳಿಸಲಾಗಿದೆ. ಭಾರತವು ತನ್ನ ನೆಲದ ನಿವಾಸಿಗಳಿಗೆ ಮತ್ತು ಅನಿವಾಸಿಗಳಿಗೆ ಸ್ಥಿರವಾದ ಹೂಡಿಕೆಯ ಮಾರ್ಗೋಪಾಯಗಳನ್ನು ಹಾಕಿಕೊಟ್ಟಿದೆ ಎಂದು ಶೇಕಡಾ 72% ರಷ್ಟು ಅನಿವಾಸಿ ಭಾರತೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಗತಿಕವಾಗಿ ಭಾರತದ ಆರ್ಥಿಕತೆಯು ಗಮನಾರ್ಹ ಸ್ಟೆಬಿಲಿಟಿ ಹೊಂದಿರುವುದು ಎನ್‌ಆರ್‌ಐ ಗಳ ಗಮನವನ್ನು ಸೆಳೆದಿದೆ. ಇನ್ನು ಅನಿವಾಸಿ ಭಾರತೀಯರು ತಾವು ಗಳಿಸುವ ವಿದೇಶಿ ಕರೆನ್ಸಿಗಳನ್ನು ಸುಲಭವಾಗಿ ಪರಿವರ್ತಿಸಿ ಭಾರತದಲ್ಲಿ ಹೂಡಿಕೆ ಮತ್ತು ಉಳಿತಾಯ ಮಾಡಬಹುದು. ಇನ್ನು 56 ಶೇಕಡಾ ಯುಎಸ್ ಮೂಲದ ಎನ್‌ಆರ್‌ಐಗಳು ಮತ್ತು 44 ಶೇಕಡಾ ಕೆನಡಾದ ಎನ್‌ಆರ್‌ಐಗಳು ತಮ್ಮ ನಿವೃತ್ತಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರೋದಕ್ಕೆ ಈಗಾಗಲೇ ಭಾರತದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇದರ ಜೊತೆ ಯುಕೆಯಿಂದ 35 ಶೇಕಡಾ ಮತ್ತು ಸಿಂಗಾಪುರದಿಂದ 45 ಶೇಕಡಾ ಎನ್‌ಆರ್‌ಐಗಳು ಅದೇ ಉದ್ದೇಶಕ್ಕಾಗಿ ಉಳಿತಾಯ ಮತ್ತು ಹೂಡಿಕೆಗಳನ್ನು ಮಾಡುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read